ದೆಹಲಿ, ಅ 06 (DaijiworldNews/HR): ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ಅವರ ಮೂವರು ಆಪ್ತ ಸಹಾಯಕರಿಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ನೀಡಿದೆ.
ವಿವೇಕ್ ತ್ಯಾಗಿ, ಸರ್ವೇಶ್ ಮಿಶ್ರಾ ಮತ್ತು ಕನ್ವರ್ಬೀರ್ ಸಿಂಗ್ ಅವರಿಗೆ ಇಡಿ ಸಮನ್ಸ್ ನೀಡಿದ್ದು, ತ್ಯಾಗಿ, ಮಿಶ್ರಾ ಮತ್ತು ಸಿಂಗ್ಗೆ ಸಮನ್ಸ್ ಜಾರಿ ಮಾಡಲಾಗಿದ್ದು, ಮಿಶ್ರಾ ಶುಕ್ರವಾರ ಇಡಿ ಮುಂದೆ ಹಾಜರಾಗಿದ್ದಾರೆ ಎಂದು ವರದಿಯಾಗಿದೆ.
ಇನ್ನು ಅಕ್ಟೋಬರ್ 10 ರವರೆಗೆ ಇಡಿ ಕಸ್ಟಡಿಯಲ್ಲಿರುವ ಸಂಜಯ್ ಸಿಂಗ್ ಅವರ ಮುಂದೆ ತನಿಖಾ ಸಂಸ್ಥೆ ಮೂವರನ್ನು ವಿಚಾರಣೆಗೆ ಒಳಪಡಿಸುವ ನಿರೀಕ್ಷೆಯಿದೆ.