ಚಿಕ್ಕಮಗಳೂರು,ಏ12(AZM):ಮಗಳು ಮೃತಪಟ್ಟ ನೋವು ಸಹಿಸಲಾಗದೆ ದಂಪತಿಗಳು ಸೇರಿದಂತೆ ಮೂವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಹರಿಹರಪುರದಲ್ಲಿ ನಡೆದಿದೆ.
ಮೃತರನ್ನು ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಕೆಳಪೇಟೆ ನಿವಾಸಿಗಳಾದ ಸುಬ್ಬಮ್ಮ, ಶಶಿಕಲಾ, ಉಮೇಶ್ ಎಂದು ಗುರುತಿಸಲಾಗಿದೆ. ಉಮೇಶ್ ಹಾಗೂ ಶಶಿಕಲಾ ದಂಪತಿಯಾಗಿದ್ದು, ಸುಬ್ಬಮ್ಮ ಶಶಿಕಲಾಳ ತಾಯಿಯಾಗಿದ್ದಾರೆ.
ಉಮೇಶ್ ಹಾಗೂ ಶಶಿಕಲಾ ದಂಪತಿಯ 2 ವರ್ಷದ ಮಗಳು ಅಮೂಲ್ಯಳಿಗೆ ಹೃದಯ ಸಂಬಂಧಿ ಕಾಯಿಲೆ ಇತ್ತು,ಆದ್ದರಿಂದ ಅವರಿಗೆ ಹಾರ್ಟ್ ಆಪರೇಷನ್ ಮಾಡಿಸಿದ್ರು. ಆದರೂ ಕೂಡ ಮಗು ಯುಗಾದಿ ಹಬ್ಬದಂದು ಸಾವನ್ನಪ್ಪಿತ್ತು. ಇದರಿಂದ ಮನನೊಂದ ಮನೆಯವರು, ಎಲ್ಲರೂ ಕೈಗೆ ವೇಲ್ ಕಟ್ಟಿಕೊಂಡು ಇಂದು ತುಂಗಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ,
ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಹರಪುರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.