ಉತ್ತರ ಪ್ರದೇಶ, ಅ 02 (DaijiworldNews/HR): ಬಿ.ಟೆಕ್ ಪೂರ್ಣಗೊಳಿಸಲು ಸಾಧ್ಯವಾದೆ ಯೂಟ್ಯೂಬ್ ಚಾನೆಲ್ ಮೂಲಕ ಯಶಸ್ಸು ಕಂಡು ಈಗ 9100 ಕೋಟಿ ರೂ. ಮೌಲ್ಯದ 'ಫಿಸಿಕ್ಸ್ ವಾಲಾ' ಎಂಬ ಎಜು-ಟೆಕ್ ಸಂಸ್ಥೆ ಒಡೆಯ ಅಲಖ್ ಪಾಂಡೆಯ ಯಶಸ್ಸಿನ ಕಥೆ.
ಅಲಖ್ ಪಾಂಡೆಯವರು ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರೂ ಅವರಿಗೆ ಬಿ.ಟೆಕ್ ಪದವಿ ಪೂರ್ಣಗೊಳಿಸಲು ಸಾಧ್ಯವಾಗದೆ ಕಾಲೇಜಿನಿಂದ ಡ್ರಾಪ್ ಔಟ್ ಆಗುತ್ತಾರೆ. ಬಳಿಕ ಯೂಟ್ಯೂಬ್ ಚಾನೆಲ್ ಮೂಲಕ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡಲು ಪ್ರಾರಂಭಿಸುತ್ತಾರೆ. ಇಂದು ಈ ಚಾನೆಲ್ 9100 ಕೋಟಿ ರೂ.ಎಡ್ ಟೆಕ್ ಸಂಸ್ಥೆಯಾಗಿ ಬೆಳೆದಿದೆ.
ಮೊದಲಿಗೆ ಅಲಖ್ ಪಾಂಡೆ ಅವರು ಯೂಟ್ಯೂಬ್ ಚಾನೆಲ್ ಅನ್ನು ಸಣ್ಣ ಪ್ರಮಾಣದಲ್ಲಿ ಪ್ರಾರಂಭಿಸಿ ಟ್ಯೂಷನ್ ಶುಲ್ಕದಿಂದ ಅವರ ಮೊದಲ ಗಳಿಕೆ 5,000ರೂ. ಆಗಿತ್ತು. ಆದರೆ ಇಂದು ಅದೇ ಯೂಟ್ಯೂಬ್ ಚಾನೆಲ್ 9100 ಕೋಟಿ ರೂ. ಮೌಲ್ಯದ 'ಫಿಸಿಕ್ಸ್ ವಾಲಾ' ಎಂಬ ಎಜು-ಟೆಕ್ ಸಂಸ್ಥೆಯಾಗಿ ನಿಂತಿದೆ.
ಇನ್ನು 'ಫಿಸಿಕ್ಸ್ ವಾಲಾ' ಇಂದು 61 ಯೂಟ್ಯೂಬ್ ಚಾನೆಲ್ ಗಳನ್ನು ಹೊಂದಿದ್ದು 31 ಮಿಲಿಯನ್ ಗಿಂತಲೂ ಹೆಚ್ಚಿನ ಬಳಕೆದಾರರನ್ನು ಹೊಂದಿದೆ. ಅಲ್ಲದೆ ಪಾಂಡೆ ಉತ್ತರ ಪ್ರದೇಶದ ಅತೀಕಿರಿಯ ವಯಸ್ಸಿನ ಉದ್ಯಮಿಗಳಲ್ಲಿ ಒಬ್ಬರಾಗಿದ್ದಾರೆ.
2021ರಲ್ಲಿ ಅಲಖ್ ಪಾಂಡೆ ಅವರ ಕಂಪನಿ 9.4 ಕೋಟಿ ರೂ. ಲಾಭ ಗಳಿಸಿದ್ದು, 2022ರಲ್ಲಿ 133.7 ಕೋಟಿ ರೂ. ಹಾಗೂ 2023ರಲ್ಲಿ 108 ಕೋಟಿ ರೂ. ಲಾಭ ಗಳಿಸಿದೆ.
ಇಂದು ಯಶಸ್ವಿ ಹಾಗೂ ಶ್ರೀಮಂತ ಉದ್ಯಮಿಯಾಗಿರುವ ಅಲಖ್ ಪಾಂಡೆ ಅವರು ಸಾಕಷ್ಟು ಕಷ್ಟದ ದಾರಿಗಳನ್ನು ಮೆಟ್ಟಿನಿಂತು ಈಗ ಯಶಸ್ಸು ಕಂಡಿದ್ದಾರೆ.