ನವದೆಹಲಿ,ಏ.12(AZM): ವಿವಾದಕ್ಕೊಳಪಡದ ಅಯೋಧ್ಯೆಯ 67.7 ಎಕರೆ ಭೂಮಿಯ ಭಾಗದಲ್ಲಿ ಪೂಜೆ ನಡೆಸಲು ಅನುಮತಿ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ತಳ್ಳಿಹಾಕಿದೆ.
ಪೂಜೆ ನಡೆಸಲು ಅನುಮತಿ ಕೋರಿದ್ದ ಅರ್ಜಿಯನ್ನು ತಳ್ಳಿಹಾಕಿದ ಸುಪ್ರೀಂ ಕೋರ್ಟ್ "ಈ ದೇಶ ಶಾಂತಿಯಿಂದಿರಲು ನೀವು ಎಂದಿಗೂ ಬಿಡುವುದಿಲ್ಲ. ಯಾವಾಗಲೂ ಏನಾದರೂ ಒಂದು ಇದ್ದೇ ಇರುತ್ತದೆ" ಎಂದು ಹೇಳಿದೆ.
ಅರ್ಜಿದಾರರ ವಿರುದ್ಧ ಅಲಹಾಬಾದ್ ಹೈಕೋರ್ಟ್ ಹೇರಿದ್ದ 5 ಲಕ್ಷ ರೂ. ದಂಡವನ್ನು ರದ್ದುಗೊಳಿಸಲು ಇದೇ ಸಂದರ್ಭ ಸುಪ್ರೀಂ ಕೋರ್ಟ್ ನಿರಾಕರಿಸಿದೆ.