ಕೇರಳ, ಸೆ 25(DaijiworldNews/AK): ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ ಐ) ಸಂಘಟನೆ ಭಾರತೀಯ ಸೇನಾಪಡೆಯ ಸೈನಿಕನನ್ನು ಸೆರೆಹಿಡಿದು ಥಳಿಸಿರುವ ಘಟನೆ ಸೆಪ್ಟೆಂಬರ್ 24ರಂದು ಕೊಲ್ಲಂ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಪಿಎಫ್ ಐನ ಆರು ಮಂದಿ ಕಾರ್ಯಕರ್ತರು , ಯೋಧನನ್ನು ಸೆರೆಹಿಡಿದು ಮನೆ ಸಮೀಪದ ಕಾಡಿನೊಳಗೆ ಕರೆದೊಯ್ದು, ಕೈಯನ್ನು ಕಟ್ಟಿಹಾಕಿ ಬೆನ್ನಿನ ಮೇಲೆ ಪೆಯಿಂಟ್ ಬಳಸಿ ಪಿಎಫ್ ಐ ಎಂದು ಬರೆದು ಥಳಿಸಿರುವುದಾಗಿ ವರದಿ ವಿವರಿಸಿದೆ.
ವರದಿಯ ಪ್ರಕಾರ, ಘಟನೆಗೆ ಸಂಬಂಧಿಸಿದಂತೆ ಯೋಧ ಶೈನ್ ಕುಮಾರ್ ನೀಡಿರುವ ದೂರಿನ ಆಧಾರದ ಮೇಲೆ ಎಫ್ ಐಆರ್ ದಾಖಲಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆರು ಮಂದಿ ಕುಮಾರ್ ಅವರನ್ನು ಅಪಹರಿಸಿ ಕಡಕ್ಕಲ್ ಸಮೀಪದ ಕಾಡಿನೊಳಗೆ ಕರೆದೊಯ್ದು ಹಲ್ಲೆ ನಡೆಸಲಾಗಿದೆ. ಹಲ್ಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ