ನವದೆಹಲಿ, ಸೆ 18 (DaijiworldNews/MS): ಸೂರ್ಯನ ಮೇಲ್ಮೈ ಅಧ್ಯಯನಕ್ಕಾಗಿ ಭಾರತವು ಕೈಗೊಂಡಿರುವ ಆದಿತ್ಯ ಎಲ್ 1 ಮಿಷನ್ ವೈಜ್ಞಾನಿಕ ಮಾಹಿತಿ ಸಂಗ್ರಹಿಸಲು ಆರಂಭಿಸಿದೆ ಎಂದು ಇಸ್ರೋ ಪ್ರಕಟಿಸಿದೆ.
STEPS ಉಪಕರಣದ ಸಂವೇದಕಗಳು ಭೂಮಿಯಿಂದ 50,000km ಗಿಂತ ಹೆಚ್ಚಿನ ದೂರದಲ್ಲಿ ಸೂಪರ್-ಥರ್ಮಲ್ ಮತ್ತು ಶಕ್ತಿಯುತ ಅಯಾನುಗಳು ಮತ್ತು ಎಲೆಕ್ಟ್ರಾನ್ಗಳನ್ನು ಅಳೆಯಲು ಪ್ರಾರಂಭಿಸಿವೆ. ಈ ಡೇಟಾವು ವಿಜ್ಞಾನಿಗಳಿಗೆ ಭೂಮಿಯ ಸುತ್ತಲಿನ ಕಣಗಳ ನಡವಳಿಕೆಯನ್ನು ವಿಶ್ಲೇಷಿಸಲು ಸಹಾಯ ಮಾಡುತ್ತದೆ ”ಎಂದು ಇಸ್ರೋ ಸೋಮವಾರ ಹೇಳಿದೆ.
ಸೋಮವಾರ ಮಧ್ಯ ರಾತ್ರಿ ಆದಿತ್ಯ ಎಲ್1, ಟ್ರಾನ್ಸ್-ಲ್ಯಾಗ್ರೇಂಜ್ ಪಾಯಿಂಟ್ 1 ಇನ್ಸರ್ಷನ್ಪ್ರಕ್ರಿಯೆಯನ್ನು ಪೂರ್ಣಗೊಳಿಸಲಿದೆ. ಆದಿತ್ಯ ಎಲ್ 1 ಮಿಷನ್ ಅನ್ನು ಸೆಪ್ಟೆಂಬರ್ 2ರಂದು ಲಾಂಚ್ ಮಾಡಲಾಗಿತ್ತು. ಆದಿತ್ಯ ಎಲ್ 1 ಮಿಷನ್ ಸೂರ್ಯನ ದ್ಯುತಿಗೋಳ, ವರ್ಣಗೋಳ ಮತ್ತು ಕರೋನಾವನ್ನು ಅಧ್ಯಯನ ಮಾಡುವ ಗುರಿಯನ್ನು ಹೊಂದಿದೆ. ಇದು ಬಾಹ್ಯಾಕಾಶ ಹವಾಮಾನದ ಆಯಾಮಗಳು ಮತ್ತು ಕಣಗಳು ಮತ್ತು ಕ್ಷೇತ್ರಗಳ ಪ್ರಸರಣವನ್ನು ಸಹ ಅಧ್ಯಯನ ಮಾಡಲಿದೆ. ಆದಿತ್ಯ ಎಲ್ 1 ವ್ಯೂಮನೌಕೆಯು ಭೂ ಕಕ್ಷೆಯ ನಾಲ್ಕು ಸುತ್ತಗಳನ್ನು ಯಶಸ್ವಿಯಾಗಿ ಪೂರೈಸಿ, ಇದೀಗ ಎಲ್ 1 ಪಾಯಿಂಟ್ ಕಡೆಗೆ ತನ್ನ ಪಯಣವನ್ನು ಆರಂಭಿಸುತ್ತಿದೆ.