ಬೆಂಗಳೂರು, ಸೆ 18 (DaijiworldNews/HR): ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ಉದ್ಯಮಿಗೆ ಕೋಟ್ಯಾಂತರ ರೂ. ವಂಚನೆ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಗೋವಿಂದ ಬಾಬು ಪೂಜಾರಿ ಅವರಿಗೆ ಮತ್ತೆ ವಿಚಾರಣೆಗೆ ಹಾಜರಾಗಲು ಸಿಸಿಬಿ ಪೊಲೀಸರು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಗೋವಿಂದ ಪೂಜಾರಿಯ ಸಂಪೂರ್ಣ ಹಣದ ವಿವರ ಬಗ್ಗೆ ಸಿಸಿಬಿ ತನಿಖಾಧಿಕಾರಿಗಳು ಕಲೆ ಹಾಕುತ್ತಿದ್ದು, ಹಣದ ಆದಾಯ ಮೂಲದ ಬಗ್ಗೆಯೂ ಮಾಹಿತಿ ಕೇಳಿದ್ದು, ಸಾಲ ಮಾಡಿ ಹಣ ಕೊಟ್ಟಿರುವೆ ಎಂದು ಈಗಾಗಲೇ ಗೋವಿಂದ ಪೂಜಾರಿ ತಿಳಿಸಿದ್ದಾರೆನ್ನಲಾಗಿದೆ.
ಇನ್ನು ಈ ಕುರಿತಾಗಿಯೂ ಸಿಸಿಬಿ ಪೊಲೀಸರು ತನಿಖೆ ನಡೆಸಲಿದ್ದು, ಬ್ಯಾಂಕ್ ನಿಂದ ಆ ಸಾಲದ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ನಗದು ರೂಪದಲ್ಲಿ ಹಣ ನೀಡಿರುವ ಹಿನ್ನೆಲೆ ಈ ಎಲ್ಲಾ ಮಾಹಿತಿ ನೀಡಿಬೇಕಿದೆ. ಎಲ್ಲಾ ದಾಖಲಾತಿಗಳನ್ನ ಸಲ್ಲಿಸುವಂತೆ ಸಿಸಿಬಿ ಪೊಲೀಸರು ಗೋವಿಂದ ಬಾಬುಗೆ ತಿಳಿಸಿದ್ದಾರೆ.