ನವದೆಹಲಿ, ಸೆ 14 (DaijiworldNews/HR): ಕಾರುಗಳಲ್ಲಿ ಕಡ್ಡಾಯವಾಗಿ 6 ಏರ್ ಬ್ಯಾಗ್ ಇರಲೇಬೇಕು ಎಂಬ ಬಗ್ಗೆ ಕಂಪೆನಿಗಳಿಗೆ ನಿಯಮ ಹೇರುವುದಿಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಕಳೆದ ವರ್ಷ ಕೇಂದ್ರ ಸರಕಾರವೇ ಪ್ರಸ್ತಾವಿಸಿದ್ದ ಪ್ರಕಾರ ಹಾಲಿ ವರ್ಷದ ಅಕ್ಟೋಬರ್ ಒಳಗಾಗಿ ಕಾರುಗಳಲ್ಲಿ ಆರು ಏರ್ಬ್ಯಾಗ್ಗಳು ಇರಬೇಕು ಎಂದು ಸೂಚಿಸಲಾಗಿತ್ತು. ಆದರೆ ಕಾರುಗಳಲ್ಲಿ ಕಡ್ಡಾಯವಾಗಿ 6 ಏರ್ ಬ್ಯಾಗ್ ಇರಲೇಬೇಕು ಎಂಬ ಬಗ್ಗೆ ಕಂಪೆನಿಗಳಿಗೆ ನಿಯಮ ಹೇರುವುದಿಲ್ಲ ಎಂದರು.
ಇನ್ನು 2021 ಎ.1ರಿಂದ ಮೊದಲ 2 ಸೀಟುಗಳಿಗೆ ಏರ್ಬ್ಯಾಗ್ ಕಡ್ಡಾಯಗೊಳಿಸಲಾಗಿತ್ತು ಎಂದು ತಿಳಿಸಿದ್ದಾರೆ.