ನವದೆಹಲಿ, ಸೆ 11 (DaijiworldNews/MS): ಭಾರತೀಯ ವಾಯುಪಡೆಯ (ಐಎಎಫ್) ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಅವರು ಸ್ಪೇನ್ನ ಸೆವಿಲ್ಲೆಯಲ್ಲಿ ಏರ್ಬಸ್ ಡಿಫೆನ್ಸ್ ತಯಾರಿಸಿದ ಸಿ-295 ಸಾಗಣೆ ವಿಮಾನವನ್ನು ಸ್ವೀಕರಿಸಲು ಇಂದು ಸ್ಪೇನ್ಗೆ ತೆರಳಲಿದ್ದಾರೆ.
ಈ ಬಗ್ಗೆ ಐಎಎಫ್ ಅಧಿಕಾರಿಗಳು ಮಾಹಿತಿ ನೀಡಿದ್ದು, ಇದರಲ್ಲಿ, 73 ಸೈನಿಕರು, 48 ಪ್ಯಾರಾಟ್ರೂಪರ್, 12 ಸ್ಟ್ರೆಚರ್ ಇಂಟೆನ್ಸಿವ್ ಕೇರ್ ಮೆಡಿವಾಕ್, 27 ಸ್ಟ್ರೆಚರ್ ಮೆಡಿವಾಕ್ ಮತ್ತು 4 ವೈದ್ಯಕೀಯ ಅಟೆಂಡೆಂಟ್ಗಳು ಒಟ್ಟಿಗೆ ಪ್ರಯಾಣಿಸಬಹುದು. ಇದು 9250 ಕೆಜಿ ತೂಕ ಹೊತ್ತು ಹಾರುವ ಸಾಮರ್ಥ್ಯ ಹೊಂದಿದ್ದು ಸಣ್ಣ ಏರ್ಸ್ಟ್ರಿಪ್ಗಳಲ್ಲಿಯೂ ಇಳಿಯಬಹುದು.
C-295 ಸಾರಿಗೆ ವಿಮಾನವು ಕೆಲವು ವಾರಗಳ ನಂತರ ಭಾರತಕ್ಕೆ ಬಂದಿಳಿದ್ದು, ಅಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಐಎಎಫ್ಗೆ ಔಪಚಾರಿಕವಾಗಿ ಸೇರ್ಪಡೆಗೊಳಿಸುತ್ತಾರೆ. 2021 ರಲ್ಲಿ, ಭಾರತವು ಭಾರತೀಯ ವಾಯುಪಡೆಗೆ 56 C-295 ವಿಮಾನಗಳನ್ನು ತಲುಪಿಸಲು ಏರ್ಬಸ್ನೊಂದಿಗೆ ಒಪ್ಪಂದ ಮಾಡಿಕೊಂಡಿತ್ತು