ಭೋಪಾಲ್ , ಸೆ 03 (DaijiworldNews/AK): ಚುನಾವಣಾ ರಾಜ್ಯವಾದ ಮಧ್ಯಪ್ರದೇಶದಲ್ಲಿ ಓರ್ವ ಹಾಲಿ ಬಿಜೆಪಿ ಶಾಸಕ ಸೇರಿದಂತೆ ವಿವಿಧ ಪಕ್ಷಗಳ ಒಟ್ಟು ಒಂಬತ್ತು ಮಂದಿ ನಾಯಕರು ಶನಿವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರೆ.
ಅವರೆಲ್ಲ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಹಾಗೂ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದ ರಣದೀಪ್ ಸಿಂಗ್ ಸುರ್ಜೇವಾಲ ಮತ್ತಿತರರ ಉಪಸ್ಥಿತಿಯಲ್ಲಿ ವಿರೋಧ ಪಕ್ಷವಾದ ಕಾಂಗ್ರೆಸ್ ಸೇರಿಕೊಂಡಿದ್ದಾರೆ ಎಂದು ವರದಿ ಮಾಡಿದೆ.
ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವ ಒಂಬತ್ತು ನಾಯಕರ ಪೈಕಿ ಮೂವರು ನಾಯಕರು ಮೂಲ ಬಿಜೆಪಿಗೆ ಸೇರಿದ್ದಾರೆ. ಈ ಪೈಕಿ ಇಂದೋರ್ ನಿಂದ ಐದು ಬಾರಿ, ಬದ್ನಾವರ್(ಧಾರ್)ನಿಂದ ಕ್ರಮವಾಗಿ 19 993 ಹಾಗೂ 2013ರಲ್ಲಿ ಗೆಲುವು ಸಾಧಿಸಿದ್ದ ಭನ್ವರ್ ಸಿಂಗ್ ಶೆಖಾವತ್ ಕೂಡಾ ಸೇರಿದ್ದಾರೆ.
ಮಾಜಿ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ಉಮಾಶಂಕರ್ ಗುಪ್ತಾರ ಸೋದರಳಿಯ ಹಾಗೂ ಭೋಪಾಲ್ ನ ಬಿಜೆಪಿ ನಾಯಕ ಆಶಿಶ್ ಅಗರ್ವಾಲ್ ‘ಗೋಲು’ ಕಾಂಗ್ರೆಸ್ ಪಕ್ಷದತ್ತಮುಕ ಮಾಡಿದ್ದಾರೆ. ಕತ್ನಿ ಜಿಲ್ಲೆಯ ತಂದೆ-ಪುತ್ರ ಚೆದಿಲಾಲ್ ಪಾಂಡೆ ಹಾಗೂ ಶಿವ್ ರಾಮ್ ಪಾಂಡೆ ಕೂಡಾ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಮಾಜಿ ಕಾಂಗ್ರೆಸ್ ಶಾಸಕ ದೇವೇಂದ್ರ ಸಿಂಗ್ ರಘುವಂಶಿಯವರ ಪುತ್ರಿ ಅನ್ಶು ರಘುವಂಶಿ ಹಾಗೂ ಅರವಿಂದ್ ಧಾಕಡ್ ಮತ್ತೆ ಮಾತೃಪಕ್ಷಕ್ಕೆ ಮರಳಿದರು. ಇವರೊಂದಿಗೆ ಝಾನ್ಸಿ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿದ್ದ ಸುಜನ್ ಸಿಂಗ್ ಬುಂದೇಲಾರ ಪುತ್ರ ಚಂದ್ರಭೂಷಣ್ ಸಿಂಗ್ ಬುಂದೇಲಾ ಕೂಡಾ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಪ್ರಮುಖ ನಾಯಕರಾಗಿದ್ದಾರೆ.