ನವದೆಹಲಿ, ಸೆ 03 (DaijiworldNews/Ak): ರಾಜಕೀಯದಲ್ಲಿ ಸದಾ ಬ್ಯುಸಿಯಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಡುಗೆ ಮಾಡುವುದರಲ್ಲಿ ಮಗ್ನರಾಗಿದ್ದಾರೆ. ಇದೀಗ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರೊಂದಿಗೆ ರಾಹುಲ್ ಸೇರಿ ಸ್ಪೆಷಲ್ ಚಂಪಾರಣ್ ಮಟನ್ ಅಡುಗೆ ಮಾಡಿ ಉಣಬಡಿಸಿದ್ದಾರೆ.
ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.ಈ ವೀಡಿಯೋದಲ್ಲಿ ಲಾಲು ಪ್ರಸಾದ್ ಯಾದವ್ ಅವರೊಂದಿಗೆ ರಾಹುಲ್ ಗಾಂಧಿಯೂ ವಿಶೇಷ ಖಾದ್ಯಗಳನ್ನ ತಯಾರಿಸಿ ಉಣಬಡಿಸಿದ್ದಾರೆ.
ಇನ್ನೂ ಈ ವೀಡಿಯೋ ಕುರಿತು ಪ್ರತಿಕ್ರಿಯಿಸಿರುವ ರಾಹುಲ್, ನಾನು ಯುರೋಪ್ನಲ್ಲಿ ಕೆಲಸ ಮಾಡುತ್ತಿದ್ದಾಗ ಒಬ್ಬಂಟಿಯಾಗಿರುತ್ತಿದ್ದೆ. ಹಾಗಾಗಿ ಅಡುಗೆ ಕಲಿಯಬೇಕಾದ ಅನಿವಾರ್ಯತೆ ಇತ್ತು. ನನಗೆ ಅಡುಗೆ ಮಾಡುವುದು ಗೊತ್ತಿದೆ. ಆದ್ರೆ ಹೆಚ್ಚು ನಿಪುಣನಲ್ಲ. ಲಾಲು ಯಾದವ್ ಜೀ ಅವರು ಬೆಸ್ಟ್ ಕುಕ್, ಉತ್ತಮವಾಗಿ ಅಡುಗೆ ಮಾಡ್ತಾರೆ ಎಂದು ಹೇಳಿಕೊಂಡಿದ್ದಾರೆ.
ಅಡುಗೆ ಮಾಡುವ ಬಗ್ಗೆ ರಾಹುಲ್ ಗಾಂಧಿ ಪ್ರಶ್ನೆಗೆ ಉತ್ತರಿಸಿದ ಲಾಲು ಪ್ರಸಾದ್ ಯಾದವ್, ನಾನು 6 ಅಥವಾ 7ನೇ ತರಗತಿಯಲ್ಲಿದ್ದೆ. ಆಗ ನನ್ನ ಸಹೋದರ ಪಾಟ್ನಾದಲ್ಲಿ ಕೆಲಸ ಮಾಡಿಕೊಂಡಿದ್ದ, ನನ್ನನ್ನೂ ಕರೆದಿದ್ದ. ನಾನು ಅವನನ್ನು ಭೇಟಿ ಮಾಡಲು ಹೋದಾಗ ಅಲ್ಲಿ ನನಗೆ ಅಡುಗೆ ಮಾಡುವುದು, ಮಸಾಲೆ ಪುಡಿ ಮಾಡುವುದು, ಪಾತ್ರೆ ತೊಳೆಯುವುದು ಎಲ್ಲವನ್ನೂ ಕಲಿಸಿಕೊಟ್ಟ ಎಂದು ಹೇಳಿಕೊಂಡಿದ್ದಾರೆ.