ವಿಜಯಪು, ಸ 01 (DaijiworldNews/HR): ಬಿಜೆಪಿ ಪಕ್ಷದ ಯಾವುದೇ ಶಾಸಕರು ದುಡುಕಿನ ನಿರ್ಧಾರ ಕೈಗೊಂಡು ಆಪರೇಷನ್ ಹಸ್ತಕ್ಕೆ ಬಲಿಯಾಗಬೇಡಿ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಎಚ್ಚರಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ರಾಹುಲ್ ಗಾಂಧಿ, ಸಿದ್ಧರಾಮಯ್ಯ, ಶಿವಕುಮಾರ ಕರೆದಿದ್ದಾರೆ ಎಂದು ಬಿಜೆಪಿ ಪಕ್ಷದ ಯಾವುದೇ ಶಾಸಕರು ದುಡುಕಿನ ನಿರ್ಧಾರ ಕೈಗೊಂಡು ಆಪರೇಷನ್ ಹಸ್ತಕ್ಕೆ ಬಲಿಯಾಗಬೇಡಿ. ಕಾಂಗ್ರೆಸ್ ಸೇರಿದರೆ ಭವಿಷ್ಯದಲ್ಲಿ ನೀವೆಂದೂ ಶಾಸಕರಾಗಲು ಸಾಧ್ಯವಿಲ್ಲ ಎಂದರು.
ಇನ್ನು ಕಾಂಗ್ರೆಸ್ ಪಕ್ಷದ ಬಹಳಷ್ಟು ಶಾಸಕರು ಅಸಮಾಧಾನಗೊಂಡಿದ್ದು, ಸ್ವಪಕ್ಷದ ಶಾಸಕರಗೆ ಸಚಿವರು ಗೌರವ ನೀಡುತ್ತಿಲ್ಲವಂದು, ಮತ್ತೆ ಕೆಲ ಶಾಸಕರಿಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂಬ ಅಸಮಾಧಾನವಿದೆ ಎಂದಿದ್ದಾರೆ.