ಕೇರಳ, ಆ 29 (DaijiworldNews/MS): 15 ವರ್ಷದ ಬಾಲಕನೊಬ್ಬ ತಂದೆಯ ತಲೆಗೆ ಸುತ್ತಿಗೆಯಿಂದ ಹಲವು ಬಾರಿ ಹೊಡೆದು ಕೊಲೆಗೆ ಯತ್ನಿಸಿದ ಘಟನೆ ಆ. ೨೮ರ ಸೋಮವಾರದಂದು ನಡೆದಿದೆ.
ಕೇರಳದ ಪೋತೆನ್ಕೋಡ್ನಲ್ಲಿ ಘಟನೆ ನಡೆದಿದ್ದು ಬಳಿಕ ಬಾಲಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಯಾವುದೋ ಕಾರಣಕ್ಕೆ ತಂದೆ ಮಗನನ್ನು ಗದರಿಸಿದ್ದರಿಂದ ತಂದೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. "ಹುಡುಗನು ತನ್ನ ತಂದೆ ಬೈದರೆಂದು ಸಿಟ್ಟಿನಿಂದ ಸುತ್ತಿಗೆಯಿಂದ ತಲೆಗೆ ಅನೇಕ ಬಾರಿ ಹೊಡೆದಂತೆ ತೋರುತ್ತಿದೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ಘಟನೆ ಬಗ್ಗೆ ತಿಳಿಸಿದ್ದಾರೆ.
ಮಗನ ಕೃತ್ಯದಿಂದ ಬೆಚ್ಚಿಬಿದ್ದ ತಂದೆ ಮನೆಯಿಂದ ಹೊರಗೆ ಬಂದು ಓಡಿಬಂದಿದ್ದಾರೆ. ಇದೇ ವೇಳೆ ಮಗ ಕೊಠಡಿಯೊಳಗೆ ನೇಣು ಬಿಗಿದುಕೊಳ್ಳಲು ಯತ್ನಿಸಿದ್ದು ಬಾಲಕನನ್ನು ಸ್ಥಳೀಯರು ಮತ್ತು ಪೊಲೀಸರು ರಕ್ಷಿಸಿದ್ದಾರೆ.
ಇಬ್ಬರೂ ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.