ನವದೆಹಲಿ, ಆ 29 (DaijiworldNews/MS): ನಾಳೆ ಆ.30ರ ರಾತ್ರಿ ಖಗೋಳ ಕೌತುಕ ವಿದ್ಯಮಾನ ನಡೆಯಲ್ಲಿದ್ದು ದಶಕಗಳಿಗೊಮ್ಮೆ ಕಾಣಿಸುವ ಈ ಅಪರೂಪದ ʼಸೂಪರ್ ಬ್ಲೂ ಮೂನ್’ ಕಾಣಿಸಿಕೊಳ್ಳಲಿದೆ.
ಸೂಪರ್ ಬ್ಲೂ ಮೂನ್ ಪದದಂತೆ ಚಂದಿರ ಅಕ್ಷರಶಃ ನೀಲಿಯಾಗಿ ಕಾಣಿಸುವುದಿಲ್ಲ. ವಾಸ್ತವವಾಗಿ, ಚಂದ್ರನು ಕಿತ್ತಳೆ ಬಣ್ಣದಲ್ಲಿ ನಾಳೆ ಕಾಣಿಸಿಕೊಳ್ಳುತ್ತಾನೆ.
ಬ್ಲೂನ್ ಮೂನ್ ಉದಯದಂದು ಚಂದ್ರನ ಆಕಾರ ದೊಡ್ಡದಾಗುತ್ತದೆ. ಈ ವರ್ಷ ಮೂರನೇ ಬಾರಿ ಬ್ಲೂ ಮೂನ್ ಕಾಣಿಸಿದೆ. ನಾಸಾದ ಪ್ರಕಾರ, ಈ ವರ್ಷ ನಾಲ್ಕು ಬಾರಿ ಬ್ಲೂ ಮೂನ್ ಸಂಭವಿಸಲಿದೆ. ನಾಳೆ ಅಂದರೆ ಆಗಸ್ಟ್ 30 ರಂದು ಕಾಣಿಸುವುದು ಮೂರನೇ ಬ್ಲೂ ಮೂನ್ ಆಗಿದೆ. ಈ ತಿಂಗಳು ಎರಡು ದಿನ ಚಂದ್ರನು ಪೂರ್ಣ ಆಕಾರದಲ್ಲಿ ಆಗಸದಲ್ಲಿ ಉದಯಿಸಲಿದ್ದಾನೆ.