ನವದೆಹಲಿ, ಆ 29 (DaijiworldNews/HR): ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು ಐದು ಕೋಟಿ ರೂ, ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಅಧಿಕಾರಿಯನ್ನು ಸಿಬಿಐ ಬಂಧಿಸಿದೆ.
ಅಬಕಾರಿ ನೀತಿ ಪ್ರಕರಣದ ಆರೋಪಿ ಅಮನ್ದೀಪ್ ಸಿಂಗ್ ಧಲ್ ಅವರಿಂದ ಲಂಚ ಸ್ವೀಕಾರ ಮಾಡುತ್ತಿದ್ದ ಇಡಿ ಸಹಾಯಕ ನಿರ್ದೇಶಕ ಪವನ್ ಖತ್ರಿ ಎಂಬ ಅಧಿಕಾರಿಯನ್ನು ಬಂಧಿಸಲಾಗಿದೆ.
ಇನ್ನು ಜಾರಿ ನಿರ್ದೇಶನಾಲಯದ ಕೋರಿಕೆಯ ಮೇರೆಗೆ ಪವನ್ ಖತ್ರಿ ಮತ್ತು ಕ್ಲರ್ಕ್ ನಿತೇಶ್ ಕೊಹರ್ ವಿರುದ್ದ ಸಿಬಿಐ ಎಫ್ಐಆರ್ ದಾಖಲಿಸಿದೆ.
ಅಬಕಾರಿ ಪ್ರಕರಣದ ತನಿಖೆಯಲ್ಲಿ ತಮಗೆ ಸಹಾಯ ಮಾಡುವಂತೆ ಅಮನ್ದೀಪ್ ಸಿಂಗ್ ಧಲ್ ಮತ್ತು ದೀಪಕ್ ಸಂಗ್ವಾನ್ ಅವರು 2022ರ ಡಿಸಂಬರ್ ಮತ್ತು ಜನವರಿ 2023ರ ನಡುವೆ ಪ್ರವೀಣ್ ವಾಟ್ಸ್ ಅವರಿಗೆ ಐದು ಕೋಟಿ ರೂ ನೀಡಿದ್ದರು ಎಂದು ಎಫ್ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.