ಬೆಂಗಳೂರು, ಆ 28 (DaijiworldNews/HR): ಚಂದ್ರಯಾನ 3 ಯಶಸ್ಸಿನ ಬೆನ್ನಲ್ಲೇ ಇಸ್ರೋ ಸೂರ್ಯನನ್ನು ಅಧ್ಯಯನ ಮಾಡಲು 'ಆದಿತ್ಯ-L1' ಉಡಾವಣೆಗೆ ಸಜ್ಜಾಗಿದ್ದು, ನೌಕೆಯ ಹಾರಾಟವನ್ನು ಸೆಪ್ಟೆಂಬರ್ 2 ರಂದು ಶ್ರೀಹರಿಕೋಟಾದಿಂದ ಬೆಳಗ್ಗೆ 11:50 ಗಂಟೆಗೆ ನಿಗದಿಪಡಿಸಲಾಗಿದೆ.
https://lvg.shar.gov.in/VSCREGISTRATION/index.jsp ನಲ್ಲಿ ನೋಂದಾಯಿಸುವ ಮೂಲಕ ಶ್ರೀಹರಿಕೋಟಾದ ಲಾಂಚ್ ವ್ಯೂ ಗ್ಯಾಲರಿಯಿಂದ ಲಾಂಚ್ ಮಾಡುವುದನ್ನು ವೀಕ್ಷಿಸಲು ನಾಗರಿಕರನ್ನು ಆಹ್ವಾನಿಸಲಾಗಿದೆ. ನೋಂದಣಿಯ ಪ್ರಾರಂಭವನ್ನು https://isro.gov.in/Aditya_L1.htmlಅಲ್ಲಿ ಪ್ರಕಟಿಸಲಾಗುತ್ತದೆ ಎಂದು ಇಸ್ರೋ ಹೇಳಿದೆ.
ಇನ್ನು ಚಂದ್ರನ ಮೇಲ್ಮೈ ಮತ್ತು ವಿವಿಧ ಆಳಗಳಲ್ಲಿ ತಾಪಮಾನದಲ್ಲಿ ಭಾರೀ ವ್ಯತ್ಯಾಸ ಇರುವುದನ್ನು ಇಸ್ರೋದ ಪ್ರಗ್ಯಾನ್ ರೋವರ್ ಕಂಡುಕೊಂಡಿದ್ದು, ಈ ಶೋಧವು ಬಾಹ್ಯಾಕಾಶ ವಿಜ್ಞಾನದ ಚರಿತ್ರೆಯಲ್ಲಿಯೇ ಐತಿಹಾಸಿಕ ಬೆಳವಣಿಗೆಯಾಗಿದೆ.