ಶ್ರೀನಗರ, ಏ09(AZM): ಆರೆಸ್ಸೆಸ್ ಮುಖಂಡರೊಬ್ಬರ ಮೇಲೆ ಉಗ್ರರು ದಾಳಿ ನಡೆಸಿರುವ ಘಟನೆ ಜಮ್ಮು ಕಾಶ್ಮೀರದಲ್ಲಿ ಇಂದು ನಡೆದಿದ್ದು,ರಕ್ಷಣೆಗೆಂದು ಬಂದ ಭದ್ರತಾ ಸಿಬ್ಬಂದಿಯನ್ನು ಹತ್ಯೆಗಯ್ಯಲಾಗಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ ಬಂದೂಕುಧಾರಿ ವ್ಯಕ್ತಿಯೊಬ್ಬ ಆಸ್ಪತ್ರೆಯ ಒಳಕ್ಕೆ ನುಗ್ಗಿ ಆರೆಸ್ಸೆಸ್ ಮುಖಂಡ ಶರ್ಮಾ ಮತ್ತು ಅವರ ಭದ್ರತಾ ಸಿಬ್ಬಂದಿ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, ಭದ್ರತಾ ಸಿಬ್ಬಂದಿ ಮೃತರಾದರೆ, ಶರ್ಮಾ ಅವರು ಗಂಭಿರವಾಗಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಘಟನೆಯ ನಂತರ ಮುಂಜಾಗ್ರತೆ ಕ್ರಮವಾಗಿ ದೃಷ್ಟಿಯಿಂದ ಕಿಶ್ತ್ವಾರ್ ನಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ.
ಕಳೆದ ವರ್ಷವೂ ಇಂಥದೇ ಘಟನೆಯಲ್ಲಿ ಬಿಜೆಪಿ ಕಾರ್ಯದರ್ಶಿ ಅನಿಲ್ ಪರಿಹಾರ್ ಮತ್ತು ಅವರ ಸಹೋದರ ಅಜಿತ್ ಅವರನ್ನು ಗುಂಡಿಕ್ಕಿ ಉಗ್ರರು ಹತ್ಯೆ ಮಾಡಿದ್ದರು.