ಮಧುರೈ, ಆ 27 (DaijiworldNews/HR): ರೈಲಿನಲ್ಲಿ ಆಕಸ್ಮಿಕ ಬೆಂಕಿ ಅವಘಢ ಸಂಭವಿಸಿದ ರೈಲಿನ ಖಾಸಗಿ ಬೋಗಿಯಲ್ಲಿ ಅಡುಗೆ ಮಾಡಲು ಅಕ್ರಮವಾಗಿ ಸಾಗಿಸುತ್ತಿದ್ದ ಅಡುಗೆ ಅನಿಲ ಸಿಲಿಂಡರ್ ಮತ್ತು ಸ್ಟವ್ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಕ್ನೋದಿಂದ ಬಂದ ಭಾರತ್ ಗೌರವ್ ಪ್ರವಾಸಿ ರೈಲು ಮಧುರೈ ರೈಲ್ವೆ ಜಂಕ್ಷನ್ನಿಂದ ಒಂದು ಕಿಲೋಮೀಟರ್ ದೂರದಲ್ಲಿ ನಿಂತಿತು. ಶನಿವಾರ ಬೆಳಗ್ಗೆ 6.30ಕ್ಕೆ ಅಗ್ನಿಶಾಮಕ ಸೈರನ್ ಸದ್ದು ಕೇಳಿಸಿ ತುರ್ತು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದು, ಘಟನೆಯಲ್ಲಿ ಒಂಬತ್ತು ಮಂದಿ ಮೃತಪಟ್ಟಿದ್ದಾರೆ.
ರೈಲು ಬೋಗಿಯಲ್ಲಿ ಗ್ಯಾಸ್ ಸ್ಟವ್ ಬಳಸುತ್ತಿದ್ದುದು ದೃಢಪಟ್ಟಿದೆ. ಕಲ್ಲಿದ್ದಲು ಮತ್ತು ಕಟ್ಟಿಗೆ ಕೂಡಾ ಕೋಚ್ನಲ್ಲಿ ಪತ್ತೆಯಾಗಿದೆ.