ಚಿಕ್ಕಮಗಳೂರು, ಆ 26 (DaijiworldNews/HR): ಜನರ ಜೊತೆ ನಾವಿರುವುದು ಸಂತೋಷ ತಂದರೆ, ಕಾಂಗ್ರೆಸ್ ನವರಿಗೆ ಅಪರಾಧ ಅನಿಸುತ್ತಿರಬೇಕು ಎಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಾಂಗ್ರೆಸ್ ವಿರುದ್ದ ವಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಜಾಗತಿಕವಾಗಿ ಭಾರತಕ್ಕೆ ಗೌರವ ಸಿಗುತ್ತಿದೆ. ಚಂದ್ರಯಾನ-3 ದೇಶದ 140 ಕೋಟಿ ಜನರಿಗೆ ಸೇರಿದ್ದು ಎಂದು ಖುದ್ದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಹೇಳಿದ್ದಾರೆ. 140 ಕೋಟಿ ಜನರಲ್ಲಿ ಕಾಂಗ್ರೆಸ್ ನವರು ಇದ್ದಾರೆ ಎಂದು ನಾನು ಭಾವಿಸಿದ್ದೇನೆ ಎಂದರು.
ಇನ್ನು 140 ಜನಸಂಖ್ಯೆಯಲ್ಲಿ ಕಾಂಗ್ರೆಸ್ನವರು ಇದ್ದಾರೆಂದು ನಾವು ಭಾವಿಸಿದ್ದು, ಅವರು ತಾವಿಲ್ಲವೆಂದು ಏಕೆ ಭಾವಿಸುತ್ತಾರೆ ನನಗೆ ಅರ್ಥವಾಗುತ್ತಿಲ್ಲ ಎಂದ ಅವರು, ಜನರ ಜೊತೆ ನಾವಿರುವುದು ಸಂತೋಷ ತಂದರೆ, ಕಾಂಗ್ರೆಸ್ ನವರಿಗೆ ಅಪರಾಧ ಅನಿಸುತ್ತಿರಬೇಕು ಎಂದಿದ್ದಾರೆ.