ಮಧುರೈ, ಆ 26 (DaijiworldNews/MS): ʻಮಧುರೈ ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದ ಲಕ್ನೋ-ರಾಮೇಶ್ವರಂ ಪ್ರವಾಸಿ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ 8 ಸಾವನ್ನಪ್ಪಿದ್ದು, ೨೦ ಮಂದಿ ಗಾಯಗೊಂಡಿದ್ದಾರೆ.
ಲಕ್ನೋದಿಂದ ಬಂದ ಭಾರತ್ ಗೌರವ್ ಪ್ರವಾಸಿ ರೈಲು ಮಧುರೈ ರೈಲ್ವೆ ಜಂಕ್ಷನ್ನಿಂದ ಒಂದು ಕಿಲೋಮೀಟರ್ ದೂರದಲ್ಲಿ ನಿಂತಿತು. ಬೆಳಗ್ಗೆ 6.30ಕ್ಕೆ ಅಗ್ನಿಶಾಮಕ ಸೈರನ್ ಸದ್ದು ಕೇಳಿಸಿ ತುರ್ತು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ.
ಪ್ರಾಥಮಿಕ ವರದಿಗಳ ಪ್ರಕಾರ, ರೈಲಿನಲ್ಲಿದ್ದ ಪ್ರವಾಸಿಗರು ಮುಂಜಾನೆ ಸಿಲಿಂಡರ್ನೊಂದಿಗೆ ಅಡುಗೆ ಮಾಡುತ್ತಿದ್ದಾಗ ಸೋರಿಕೆಯಾಗಿ ಅದು ಸ್ಫೋಟಗೊಂಡು ಬೆಂಕಿ ಕಾಣಿಸಿಕೊಂಡಿದೆಎನ್ನಲಾಗಿದೆ
ರೈಲಿನ ಕೊನೆಯ ಎರಡು ಬೋಗಿ ಬೆಂಕಿಯಲ್ಲಿ ಸಂಪೂರ್ಣ ಸುಟ್ಟು ಹೋಗಿದೆ. ಈ ರೈಲು ಮೇ 17ರಂದು 15 ದಿನಗಳ ಆಧ್ಯಾತ್ಮಿಕ ಪ್ರವಾಸಕ್ಕಾಗಿ ಲಕ್ನೋದಿಂದ ಹೊರಟಿತ್ತು.
ಹೆಚ್ಚಿನ ಪ್ರಯಾಣಿಕರು ಅಗ್ನಿ ಅವಘಡ ಸಂಭವಿಸಿದ ಕಂಪಾರ್ಟ್ಮೆಂಟ್ಗಳಿಂದ ಓಡಿಹೋಗುವಲ್ಲಿ ಯಶಸ್ವಿಯಾದರೆ, ವಯಸ್ಸಾದ ಹಿರಿಯ ಪ್ರಯಾಣಿಕರು ಸಮಯಕ್ಕೆ ನಿರ್ಗಮಿಸಲು ಸಾಧ್ಯವಾಗದೆ ಬೆಂಕಿಗೆ ಆಹುತಿಯಾಗಿದ್ದಾರೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.