ಬೆಂಗಳೂರು, ಆ 25 (DaijiworldNews/MS): ರಾಜ್ಯದ 100ಕ್ಕೂ ಹೆಚ್ಚು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುತ್ತೇವೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾತನಾಡಿದ ಅವರು, ರಾಜ್ಯದಲ್ಲಿ ಮಳೆಯ ಕೊರತೆ ಕಾರಣದಿಂದ ಹಲವು ಜಿಲ್ಲೆಗಳಲ್ಲಿ ಮಳೆ ಯಾಗದಿರುವುದರಿಂದ ಅನೇಕ ಡ್ಯಾಂಗಳು ಭರ್ತಿಯಾಗದೇ ಬತ್ತಿ ಹೋಗುವ ಸ್ಥಿತಿ ತಲುಪಿದ್ದು, ಅನೇಕ ಜಲಾಶಯಗಳು ನೀರಿಲ್ಲದೇ ಖಾಲಿಯಾಗಿದೆ. ಈ ಹಿನ್ನಲೆ ಜಲಾಶಯದ ನೀರನ್ನೇ ನಂಬಿಕೊಂಡು ಬೆಳೆ ಬೆಳೆಯುತ್ತಿದ್ದ ರೈತರಿಗೆ ನೀರಿನ ಅಭಾವ ಎದುರಾಗಿದೆ ಎಂದು ಹೇಳಿದ್ದಾರೆ
ಬರಗಾಲ ಎಂದು ಘೋಷಿಸಲು ಮಾರ್ಗಸೂಚಿ, ಪಾಲಿಸಬೇಕು. ರಾಜ್ಯದಲ್ಲಿ ಬರದ ಬಗ್ಗೆ ನಮಗೆ ಸಂಪೂರ್ಣ ಮಾಹಿತಿ ಇದೆ ಆದರೆ ಮಾರ್ಗಸೂಚಿ ಅಡ್ಡ ಬರುತ್ತಿರುವುದರಿಂದ ಘೋಷಿಸಲಾಗುತ್ತಿಲ್ಲ ಎಂದು ಇದೇ ವೇಳಿ ತಿಳಿಸಿದ್ದಾರೆ.
ವಾಡಿಕೆಯಂತೆ ಅತಿ ಹೆಚ್ಚು ಮಳೆಯಾಗಬೇಕಿತ್ತು. ಆದರೆ ಮಳೆ ಕೈಕೊ್ಟ್ಟಿದೆ. ಮೋಡ ಬಿತ್ತನೆ ಬಗ್ಗೆ ಚಿಂತನೆಯಿಲ್ಲ, ಈ ಹಿಂದೆ ಮೋಡ ಬಿತ್ತನೆ ಮಾಡಿದಾಗ ಪ್ರಯೋಜನವಾಗಿರಲಿಲ್ಲ ಎಂದು ಹೇಳಿದ್ದಾರೆ.