ಛತ್ತೀಸಗಡ,ಏ09(AZM):ನಕ್ಸಲರು ನಡೆಸಿದ ದಾಳಿಯಲ್ಲಿ ಬಿಜೆಪಿ ಶಾಸಕ ಭೀಮಾ ಮಾಂಡವಿ ಸೇರಿ ಐದು ಮಂದಿ ಸಾವಿಗೀಡಾಗಿರುವ ಘಟನೆ ಛತ್ತೀಸಗಡದ ದಂತೇವಾಡ ಜಿಲ್ಲೆಯ ನಕುಲ್ ನರ್ ಪ್ರದೇಶದಲ್ಲಿ ನಡೆದಿದೆ.
ಎಲ್ ಇಡಿ ಸ್ಫೋಟಕಗಳನ್ನು ಬಳಸಿ ನಕ್ಸಲರು ದಾಳಿ ನಡೆಸಿದ್ದು, ೫ ಮಂದಿಯ ಸಾವಿಗೆ ಕಾರಣವಾಗಿದೆ. ಶಾಸಕ ಭೀಮಾ ಅವರು ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇಳೆ ಈ ದಾಳಿ ನಡೆದಿದೆ. ಸುಧಾರಿತ ಸ್ಫೋಟಕ ವಸ್ತು ಬಳಸಿ ನಡೆಸಿದ ಸ್ಫೋಟ ಇದಾಗಿದ್ದು, ಸ್ಫೋಟದ ತೀವ್ರತೆಗೆ ಐದು ಮಂದಿ ಸ್ಥಳದಲ್ಲೇ ಮೃತರಾಗಿದ್ದಾರೆ.