ಮೈಸೂರು,ಏ09(AZM): ಕಾಂಗ್ರೆಸ್ ಗೆ ಬಡವರನ್ನು ಉದ್ದಾರ ಮಾಡುವ ಉದ್ದೇಶವಲ್ಲ. ಬಡವರ ಹೆಸರಿನಲ್ಲಿ ಯೋಜನೆ ಆರಂಭಿಸಿ ಹಣ ಲೂಟಿ ಮಾಡುವ ಆಲೋಚನೆ ಇದೆ ಎಂದು ಮೈಸೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ.
ಅವರು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಬಿಜೆಪಿ ವಿಜಯ ಸಂಕಲ್ಪ ಸಭಾದಲ್ಲಿ ಪ್ರಧಾನಿ ಈ ಕುರಿತು ಮಾತನಾಡಿದ್ದಾರೆ.ಇದೇ ವೇಳೆ ಅವರು ಕಾಂಗ್ರೆಸ್ ಪ್ರಣಾಳಿಕೆಯನ್ನು ಕಟುವಾಗಿ ಟೀಕಿಸಿದರು.
ರೈತರ ಸಾಲಮನ್ನಾ ಮಾಡುವ ಹೆಸರಿನಲ್ಲಿ ಇಲ್ಲಿನ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ದುಡ್ಡು ಹೊಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ ಅಂಬರೀಶ್ ಅವರನ್ನು ನೆನೆದ ಪ್ರಧಾನಿ ಅಂಬರೀಶ್ ಸೇರಿದಂತೆ ಸುಮಲತ ಅವರು ಮಾಡಿರುವ ಕೆಲಸ ನಿಮಗೆ ತಿಳಿದೇ ಇದೆ. ಕಲೆ ಸಂಸ್ಕೃತಿಗೆ ಅವರ ಕೊಡುಗೆ ಅಪಾರವಾಗಿದೆ, ಇಂತಹವರನ್ನು ಏನು ಮಾಡಬೇಕು ಎಂದು ನೀವೇ ನಿರ್ಧಾರ ಮಾಡಬೇಕು ಎಂದು ಹೇಳಿದರು.