ನವದೆಹಲಿ, ಆ 24 (DaijiworldNews/MS): ಪ್ರಸಕ್ತ ವರ್ಷದ ಅ ೧ರಿಂದ ಅನ್ವಯವಾಗುವಂತೆ ಕೇಂದ್ರ ಸರ್ಕಾರ ಸಕ್ಕರೆ ರಫ್ತು ಮಾಡುವುದನ್ನು ನಿಷೇಧಿಸಲು ತೀರ್ಮಾನಿಸಿರುವುದಾಗಿ ವರದಿಯಾಗಿದೆ.
7 ವರ್ಷಗಳ ಅವಧಿಯಲ್ಲಿಯೇ ಇದೇ ಮೊದಲ ಬಾರಿಗೆ ಸರ್ಕಾರ ಇಂಥ ತೀರ್ಮಾನ ಕೈಗೊಂಡಿದೆ. ಹೀಗಾಗಿ, ನ್ಯೂಯರ್ಕ್, ಲಂಡನ್ ಸೇರಿದಾಂತೆ ವಿಶ್ವದ ಮಾರುಕಟ್ಟೆಗಳಲ್ಲಿ ದೇಶದಿಂದ ರಫ್ತಾಗುವ ಸಕ್ಕರೆ ಲಭ್ಯವಾಗದು. ಈಗಾಗಲೇ ದೇಶದಿಂದ ಅಕ್ಕಿ, ಈರುಳ್ಳಿ ರಫ್ತಿಗೆ ಮಾಡುವುದರ ಮೇಲೆ ನಿಷೇಧ ಹೇರಿದೆ.
ನಮ್ಮ ದೇಶದ ಬೇಡಿಕೆ ಪೂರೈಕೆ ಮತ್ತು ಸಾಕಷ್ಟು ಪ್ರಮಾಣದಲ್ಲಿ ಎಥೆನಾಲ್ ಉತ್ಪಾದನೆ ಮಾಡಬೇಕಾದ ಕಾರಣ ಈ ಕ್ರಮ ಕೈಗೊಂಡಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.