ಮೈಸೂರು, ಆ 22(DaijiworldNews/AK):ರಾಜ್ಯದಲ್ಲಿ ನಡೆಯುತ್ತಿರುವ ಶಾಸಕರ ಪಕ್ಷಾಂತರದ ಕುರಿತು ಶಾಸಕ ತನ್ವೀರ್ ಸೇಠ್ ಅವರು ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.
ನಾವು ಅಪರೇಷನಗೆ ಕೈ ಹಾಕುವುದಿಲ್ಲ. ಅಪರೇಷನ್ ಹಸ್ತ ಮಾಡುತ್ತಿಲ್ಲ, ನಮಗೆ ಅದರ ಅವಶ್ಯಕತೆ ಇಲ್ಲ. ಜನರು ಬದಲಾವಣೆ ಬಯಸಿ ನಮಗೆ 136 ಸ್ಥಾನ ಕೊಟ್ಟಿದ್ದಾರೆ ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಿನ ರಾಜಕೀಯ ಸನ್ನಿವೇಶ ಯಾವುದೂ ಸರಿಯಿಲ್ಲ. ಹೀಗಾಗಿಯೇ ನಾನು ನಿವೃತ್ತಿಗೆ ಮುಂದಾಗಿದ್ದು ಎಂದರು. ಪಕ್ಷಾಂತರ ಮಾಡುವವರ ವಿರುದ್ಧ ಎಷ್ಟೇ ಕಾನೂನು ಬಿಗಿ ಮಾಡಿದರು ರಾಜೀನಾಮೆ ಕೊಟ್ಟು ಮತ್ತೆ ಚುನಾವಣೆ ಹೋಗುವವರಿಗೆ ಏನು ಮಾಡಲು ಸಾಧ್ಯವಿಲ್ಲ ಎಂದು ಪಕ್ಷ ಬಿಟ್ಟು ಮತ್ತೆ ಪಕ್ಷಕ್ಕೆ ಬರುತ್ತಾರೆ ಎಂದು ಅಸಮಾಧಾನ ವ್ಯಕ್ಯಪಡಿಸಿದರು.