ಮಧ್ಯಪ್ರದೇಶ, ಆ 22 (DaijiworldNews/HR): ಮಧ್ಯಪ್ರದೇಶದ ವಿದಿಶಾದಲ್ಲಿ ಮಹಿಳೆಯೊಬ್ಬರು ನಾಲ್ಕು ಕಾಲುಗಳಿರುವ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಅಚ್ಚರಿಯ ಘಟನೆ ನಡೆದಿದೆ.
ಬಮೋರಾ ಸರ್ಕಾರಿ ಆಸ್ಪತ್ರೆಯಲ್ಲಿ ಧನುಷ್ ಬಾಯಿ ಎಂಬ ಮಹಿಳೆ ಮಗುವಿಗೆ ಜನ್ಮ ನೀಡಿದ್ದು, ಸದ್ಯ ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಚರ್ಚೆಗೆ ಗ್ರಾಸವಾಗಿದೆ.
ಡಾ.ರಾಜೇಶ್ ಪ್ರಕಾರ, ಈ ರೀತಿಯ ಪ್ರಕರಣವನ್ನು ವೈದ್ಯಕೀಯ ಭಾಷೆಯಲ್ಲಿ ‘ಈಸಿಯೋಪಾಗಸ್’ ಎಂದು ಕರೆಯಲಾಗುತ್ತದೆ. ಸಾವಿರಾರು ಜನರಲ್ಲಿ ಒಬ್ಬರು ಮಾತ್ರ ಹೀಗೆ ಹುಟ್ಟುತ್ತಾರೆ ಎಂದು ಹೇಳಲಾಗುತ್ತದೆ.
ಇನ್ನು ನವಜಾತ ಶಿಶುವಿಗೆ ದೈಹಿಕ ನ್ಯೂನತೆ ಇದ್ದು, ಗರ್ಭದಲ್ಲಿ ಬೆಳೆಯುತ್ತಿರುವಾಗಲೇ ಮಗುವಿನ ದೇಹದ ಕೆಳಗಿನ ಭಾಗದ ಹೆಚ್ಚುವರಿ ಬೆಳವಣಿಗೆಯಿಂದ ಇದು ಸಂಭವಿಸುತ್ತದೆ ಎಂದು ರಾಜೇಶ್ ವಿವರಿಸಿದರು.