ನವದೆಹಲಿ, ಆ 22 (DaijiworldNews/MS): ಇಡೀ ದೇಶವೇ ಕಾತರದಿಂದ ಕಾಯುತ್ತಿರುವ ಭಾರತದ ಮಹಾತ್ವಾಕಾಂಕ್ಷೆಯ ಯೋಜನೆಯಾದ ಇಸ್ರೋದ ಚಂದ್ರಯಾನ-3ರ ಬಗ್ಗೆ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದ ನಟ ಪ್ರಕಾಶ್ ರಾಜ್ ವಿರುದ್ಧ ದೂರು ದಾಖಲಿಸಲಾಗಿದೆ.
ʻಬ್ರೇಕಿಂಗ್ ನ್ಯೂಸ್ ವಿಕ್ರಂ ಲ್ಯಾಂಡರ್ ಮೂಲಕ ಚಂದ್ರನಿಂದ ಬರುವ ಮೊದಲ ಚಿತ್ರ..ವಾವ್ ಜಸ್ಟ್ ಆಸ್ಕಿಂಗ್ ʼ ಎಂದು ಇಸ್ರೋ ಮಾಜಿ ಮುಖ್ಯಸ್ಥ ಕೆ. ಶಿವನ್ ಚಹಾ ಸುರಿಯುತ್ತಿರುವ ವ್ಯಂಗ್ಯಚಿತ್ರದ ಫೋಟೊ ಹಾಕಿ ಅಣಕಿಸಿದ್ದರು. ಇದರ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಖಂಡನೆ ವ್ಯಕ್ತವಾಗಿತ್ತು.ರಾಜಕೀಯ ಸಿದ್ದಾಂತಗಳು ಯಾವುದೇ ಇದ್ದರೂ , ರಾಜಕೀಯ ಮತ್ತು ರಾಷ್ಟ್ರೀಯ ವಿಷಯಗಳ ನಡುವಿನ ವ್ಯತ್ಯಾಸ ತಿಳಿದಿರಬೇಕು. ಇದು ವಿಜ್ಞಾನಿಗಳ ಶ್ರಮವನ್ನು ಅವಮಾನಿಸುವ ಜತೆಗೆ ಇಡೀ ಯೋಜನೆಯನ್ನು ಅವಮಾನಿಸಿದಂತೆ ಎಂದು ನೆಟ್ಟಿಗರೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬಾಗಲಕೋಟೆಯ ಬನಹಟ್ಟಿ ಠಾಣೆಯಲ್ಲಿ ಹಿಂದೂ ಮುಖಂಡರು, ಪ್ರಕಾಶ್ ರಾಜ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.