ಬೆಂಗಳೂರು, ಆ 22 (DaijiworldNews/HR): ಆಪರೇಷನ್ ಹಸ್ತ ಬೆನ್ನಲ್ಲೇ ಎಸ್.ಟಿ.ಸೋಮಶೇಖರ್ ಶಾಸಕರಾಗಿರುವ ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ 7.63 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ.
ಕಾಂಗ್ರೆಸ್ ಪಕ್ಷಕ್ಕೆ ಶಾಸಕ ಎಸ್.ಟಿ ಸೋಮಶೇಖರ್ ಸೇರ್ಪಡೆಯಾಗುತ್ತಾರೆಂಬ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಬಿಬಿಎಂಪಿಯಿಂದ ಅನುದಾನ ಮಂಜೂರಿನ ಆದೇಶ ಬಂದಿದೆ.
ಇನ್ನು ಆಪರೇಷನ್ ಹಸ್ತದಲ್ಲಿ ಮೊದಲ ಹೆಸರು ಕೇಳಿ ಬಂದಿದ್ದೇ ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ಅವರದ್ದು. ಹಾಗಾಗಿ ಅವರ ಕ್ಷೇತ್ರಕ್ಕೆ ಸರ್ಕಾರ ಬಂಪರ್ ಆಫರ್ ನೀಡಿರುವುದು ಸೋಮಶೇಖರ್ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿಗೆ ಪುಷ್ಠಿ ನೀಡಿದಂತಾಗಿದೆ.