ಬೆಂಗಳೂರು, ಆ 22 (DaijiworldNews/HR): ಇನ್ನು ಮುಂದೆ ಲಗೇಜ್ಗಳನ್ನು ಹೊತ್ತು ತಿರುಗಲು ಕೆಎಸ್ಆರ್ಟಿಸಿ ಲಾರಿಗಳು ರಸ್ತೆಗಿಳಿಯಲಿವೆ.
ಪ್ರಯಾಣಿಕರು ಸಂಚರಿಸುವ ಬಸ್ನಲ್ಲಿ ಇಷ್ಟು ದಿನ ಪಾರ್ಸೆಲ್ ಸೇವೆ ಒದಗಿಸಲಾಗುತ್ತಿತ್ತು. ಜೊತೆಗೆ ಕೆಲ ಖಾಸಗಿಯವರಿಗೆ ಕಾರ್ಗೋ ಸಾಗಣೆ ಟೆಂಡರ್ಗಳನ್ನು ನೀಡಿ ಅವರಿಂದ ಲಾಭವನ್ನು ಕೆಎಸ್ಆರ್ಟಿಸಿ ತನ್ನ ಬೊಕ್ಕಸಕ್ಕೆ ತುಂಬಿಸಿಕೊಳ್ಳುತ್ತಿತ್ತು. ಆದರೆ ಇತ್ತೀಚಿನ ಕೆಲ ದಿನಗಳಲ್ಲಿ ಲಗೇಜ್ ಸಾಗಣೆಗೆ ಬೇಡಿಕೆ ಹೆಚ್ಚಾದ ಹಿನ್ನೆಲೆ ಖುದ್ದು ಇನ್ನು ಮುಂದೆ ತಾವೇ ಈ ಸೇವೆ ನೀಡಲು ನಿಗಮ ಪ್ಲ್ಯಾನ್ ಮಾಡಿದೆ.
ಇನ್ನು ಈ ಮೂಲಕ ಖಾಸಗಿಯವರಿಂದ ಬರುತ್ತಿದ್ದ 28 ಕೋಟಿ ರೂ. ಹಣದಿಂದ ಸಾಗಣೆ ಲಾಭವನ್ನು 100 ಕೋಟಿಗೆ ಹೆಚ್ಚಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ ಎನ್ನಲಾಗಿದೆ.