ಬೆಂಗಳೂರು, ಆ 20 (DaijiworldNews/HR): ದೇವರಾಜ ಅರಸು ಅವರು ಎಲೆಕ್ಟ್ರಾನಿಕ್ ಸಿಟಿಗೆ ಜಮೀನು ಕೊಟ್ಟಿದ್ದು, ಹಾಗಾಗಿ ಎಲೆಕ್ಟ್ರಾನಿಕ್ ಸಿಟಿಗೆ ದೇವರಾಜ ಅರಸು ಎಲೆಕ್ಟ್ರಾನಿಕ್ ಸಿಟಿ ಎಂದು ಹೆಸರು ಇಡಲು ಚಿಂತನೆ ಮಾಡಿದ್ದೇನೆ ಎಂಬುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು ಬೆಂಗಳೂರಿಗೆ ಸಿಲಿಕನ್ ವ್ಯಾಲಿ ಅಂತ ಹೆಸರು ಬಂದಿದೆ ಅಂದರೇ ಅದಕ್ಕೆ ದೇವರಾಜ ಅರಸು ಅವರ ಕೊಡುಗೆಯೂ ಇದೆ ಎಂದರು.
ಇನ್ನು ದೇವರಾಜ ಅರಸು ಅವರ 108ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾಜಿ ವಿಧಾನಸಭಾ ಅಧ್ಯಕ್ಷ ಕಾಗೋಡು ತಿಮ್ಮಪ್ಪ ಅವರಿಗೆ ಪ್ರಶಸ್ತಿ ನೀಡಲಾಗಿದ್ದು, ಗೇಣಿದಾರರಿಗೆ ಮಾಲಿಕತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿದ್ದು ಅರಸು. ಮಾಜಿ ವಿಧಾನಸಭಾ ಅಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು ಇದರ ಹೋರಾಟ ಮಾಡಿದರು. ತಿಮ್ಮಪ್ಪ ಅವರು ಸಭಾಧ್ಯಕ್ಷರಾಗಿ ಮತ್ತು ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕಾಗೋಡು ತಿಮ್ಮಪ್ಪ ಅವರು ಅಕ್ರಮವಾಗಿ ಮನೆಯಲ್ಲಿ ವಾಸಿಸುವವರೇ ಮನೆ ಒಡೆಯ ಅಂತ ಮಾಡಿದರು. ತಿಮ್ಮಪ್ಪ ಅವರಿಗೆ ಪ್ರಶಸ್ತಿ ಕೊಟ್ಟಿದ್ದು ಅದರ ಮೌಲ್ಯ ಹೆಚ್ಚಾಯ್ತು ಎಂದು ಹೇಳಿದ್ದಾರೆ.