ಮಂಡ್ಯ, ಏ 09(MSP): ಜೆಡಿಎಸ್– ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕ್ಷೇತ್ರದಾದ್ಯಂತ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಸೋಮವಾರದಂದು ನಾಗಮಂಗಲ ತಾಲೂಕಿನ ಬೆಳ್ಳೂರಿನಲ್ಲಿ ಪ್ರಚಾರ ನಡೆಸಿ, ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಬಿರುಸಿನ ಪ್ರಚಾರ ನಡೆಸುತ್ತಿರುವ ಚಿತ್ರನಟ ಯಶ್ ವಿರುದ್ಧ ವಾಗ್ದಾಳಿ ನಡೆಸಿದರು.
ಪಾಪ ಹವಾನಿಯಂತ್ರಿತ ಕಾರುಗಳಲ್ಲಿ ಕೂತು, ಛತ್ರಿ ಹಿಡ್ಕೊಂಡು ಓಡಾಡುವವರಿಗೆ ಎಲ್ಲಿ ಬಿಸಿಲಿನ ಕಷ್ಟ ಅರ್ಥ ಆಗುತ್ತದೆ ಎಂದು ಕುಮಾರಣ್ಣ ನೀಡಿದ ಹೇಳಿಕೆ ಚೆನ್ನಾಗಿಯೇ ಇತ್ತು ಎಂದು ನಿಖಿಲ್ ತಂದೆಯ ಆಡಿದ ಮತುಗಳನ್ನು ಸಮರ್ಥಿಸಿಕೊಂಡು ಮಾತನಾಡಿ, ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ಮಾಡುತ್ತಿರುವ ವ್ಯಕ್ತಿಗೆ ನೇರವಾಗಿ ಒಂದು ನೇರವಾಗಿ ಹೇಳಲು ಇಷ್ಟಡ್ತೀನಿ, ಈ ದೊಡ್ಡ ಮನುಷ್ಯರು, ಈ ಮಹಾನುಭಾವ, ಬಾಡಿಗೆ ಕಟ್ಟದೆ ಇಷ್ಟೆಲ್ಲಾ ಮಾತನಾಡುತ್ತಾರಲ್ಲ.
ನಮ್ಮ ತಾತ ದೇಶದ ಪ್ರಧಾನಿಯಾಗಿದ್ದಾಗ ನಾವು ಇನ್ನೂ ಬಾಡಿಗೆ ಮನೆಯಲ್ಲಿಯೇ ಇದ್ದೇವು. ಆಗ ಪ್ರತಿ ತಿಂಗಳು 5 ಸಾವಿರ ರು. ಮನೆ ಬಾಡಿಗೆ ಕಟ್ಟುತ್ತಿದ್ದೇವು. ಆದರೆ ಕತ್ರಿಗುಪ್ಪೆಯಲ್ಲಿ ಬಾಡಿಗೆ ಮನೆಯಲ್ಲಿರುವ ದೊಡ್ಡ ಮನುಷ್ಯನಿಗೆ ಮನೆ ಬಾಡಿಗೆ ಕಟ್ಟಲು ಸಾಧ್ಯವಾಗಿಲ್ಲ. ಆದರೆ ಇವತ್ತು ಬಾಡಿಗೆ ಕೊಡದೇ ಇದ್ದವರು ಇಷ್ಟೆಲ್ಲಾ ಮಾತನಾಡುತ್ತಾರೆ ಎಂದು ಪರೋಕ್ಷವಾಗಿ ವ್ಯಂಗ್ಯವಾಡಿದರು.