ಬೆಂಗಳೂರು, ಆ 19 (DaijiworldNews/MS): ವಾಹನ ಸವಾರರಿಗೆ ಸಾರಿಗೆ ಇಲಾಖೆಯು ಸಿಹಿ ಸುದ್ದಿ ನೀಡಿದ್ದು, ಇನ್ನು ಡಿಎಲ್, ಆರ್.ಸಿ. ಕಾರ್ಡ್ ಗಾಗಿ ಆರ್.ಟಿ.ಒ. ಕಚೇರಿಗೆ ಅಲೆದಾಡಬೇಕಿಲ್ಲ.
ಇನ್ನು ಮುಂದೆ ಅರ್ಜಿದಾರರ ಮನೆ ಬಾಗಿಲಿಗೆ ಆರ್ಸಿ, ಡಿಎಲ್ ನ್ನು ತಲುಪಿಸಲಾಗುತ್ತದೆ. ಇದಕ್ಕಾಗಿ ಅಂಚೆ ಇಲಾಖೆ ಮೂಲಕ ಇವುಗಳನ್ನು ಮನೆಗೆ ತಲುಪಿಸುವುದಕ್ಕೆ ಸಾರಿಗೆ ಇಲಾಖೆಯು ಒಪ್ಪಂದ ಮಾಡಿಕೊಂಡಿದೆ. ಈ ಬಗ್ಗೆ ಸರ್ಕಾರದಿಂದಲೂ ಅನುಮೋದನೆ ನೀಡಲಾಗಿದೆ.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಆದೇಶ ನೀಡಲಾಗಿದ್ದು, ಅರ್ಜಿದಾರರು ಆನ್ಲೈನ್ ಮೂಲಕ ತಮ್ಮ ದಾಖಲೆಗಳು ಮನೆಗೆ ತಲುಪುವ ಬಗ್ಗೆ ಟ್ರ್ಯಾಕ್ ಮಾಡಬಹುದು ಎಂದು ಸಾರಿಗೆ ಇಲಾಖೆ ತಿಳಿಸಿದೆ.ನೂತನ ವ್ಯವಸ್ಥೆ ಜಾರಿ ಬಗ್ಗೆ ರಾಜ್ಯ ಸಾರಿಗೆ ಇಲಾಖೆ ಯಿಂದ ಮಾಧ್ಯಮ ಪ್ರಕಟಣೆ ನೀಡಲಾಗಿದೆ.