ನವದೆಹಲಿ, ಆ 18 (DaijiworldNews/AK): ದೆಹಲಿಯಿಂದ ಪುಣೆಗೆ ಹೊರಟಿದ್ದ ವಿಸ್ತಾರಾ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ ಬಂದ ಹಿನ್ನಲೆ ದೆಹಲಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
ಬೆಳಗ್ಗೆ 8.30ಕ್ಕೆ ಬೋರ್ಡಿಂಗ್ ಪ್ರಗತಿಯಲ್ಲಿದ್ದಾಗ ಜಿಎಂಆರ್ ಕಾಲ್ ಸೆಂಟರ್ಗೆ ಕರೆ ಮಾಡಿರುವ ಅಪರಿಚಿತರು ಬಾಂಬ್ ಬೆದರಿಕೆ ಒಡ್ಡಿದ್ದಾರೆ. ತಕ್ಷಣ ಬೋರ್ಡಿಂಗ್ ನಿಲ್ಲಿಸಿ, ಪ್ರತ್ಯೇಕವಾದ ಸ್ಥಳದಲ್ಲಿ ವಿಮಾನದ ತಪಾಸಣೆ ಮಾಡಲಾಗಿದೆ.
ಬಾಂಬ್ ನಿಷ್ಕ್ರಿಯ ದಳ ಮತ್ತು ವಿಶೇಷ ಭದ್ರತಾ ತಂಡಗಳು ವಿಮಾನ ಪರಿಶೀಲನೆ ಮಾಡಿದ್ದು ಯಾವುದೇ ಅನುಮಾನಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ವಕ್ತಾರರು ತಿಳಿಸಿದ್ದಾರೆ.
ವಿಮಾನದಲ್ಲಿ 100ಕ್ಕೂ ಹೆಚ್ಚು ಪ್ರಯಾಣಿಕರಿದ್ದು, ಎಲ್ಲ ಪ್ರಯಾಣಿಕರ ಲಗೇಜ್ಗಳನ್ನು ಡಿ-ಬೋರ್ಡಿಂಗ್ ಮಾಡಲಾಗಿದೆ. ಪ್ರಯಾಣಿಕರು ಪ್ರಸ್ತುತ ಟರ್ಮಿನಲ್ ಕಟ್ಟಡದಲ್ಲಿದ್ದಾರೆ ಮತ್ತು ಅವರಿಗೆ ಉಪಾಹಾರವನ್ನು ನೀಡಲಾಯಿತು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಭದ್ರತಾ ಏಜೆನ್ಸಿಗಳಿಂದ ಅಂತಿಮ ಅನುಮತಿ ದೊರೆತ ತಕ್ಷಣ ವಿಮಾನವು ಪುಣೆ ಹೊರಡಲಿದೆ.