ಬೆಂಗಳೂರು, ಆ 18(DaijiworldNews/MS): ಕಾಂಗ್ರೆಸ್ ಸರ್ಕಾರ ಷರತ್ತು ವಿಧಿಸಿ 200 ಯುನಿಟ್ ವರೆಗೆ ಉಚಿತವಾಗಿ ವಿದ್ಯುತ್ ನೀಡುತ್ತಿದೆ. ಆದರೇನು ಫಲ? ರೈತರು, ತಮಗೆ ಸರಿಯಾಗಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ ಎಂದು ಆರೋಪಿಸಲು ಆರಂಭಿಸಿದ್ದು ಈ ರೀತಿ ಆದರೆ ಉಚಿತ ಕರೆಂಟ್ ಯಾಕೆ ಬೇಕು ಸಂಸದ ಪ್ರಜ್ವಲ್ ರೇವಣ್ಣ ಪ್ರಶ್ನಿಸಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು, ಉಚಿತ ವಿದ್ಯುತ್ ಬಿಟ್ಟು ಪಂಪ್ಸೆಟ್ಗಳಿಗೆ ಸರಿಯಾಗಿ ವಿದ್ಯುತ್ ಪೂರೈಕೆ ಮಾಡಿ. ಇದರಿಂದ ಸಮಸ್ಯೆ ಆಗಿದ್ದು,ಸರಿಯಾದ ಸಮಯದಲ್ಲಿ ವಿದ್ಯುತ್ ನೀಡದೆ ರೈತರು ಬೆಳೆದ ಬೆಳೆಗಳು ಹಾಳಾಗುತ್ತಿವೆ. ನಾಲ್ಕು ಗಂಟೆ ಅಂತ ಹೇಳಿ ಮೂರು ಗಂಟೆ ವಿದ್ಯುತ್ ನೀಡುತ್ತಿದ್ದಾರೆ. ಜೋಳ ಎಲ್ಲಾ ಒಣಗುವ ಮಟ್ಟಕ್ಕೆ ಬಂದಿದೆ. ಈ ರೈತರ ಕ್ಷೇಮ ಕಾಯದಿದ್ದರೆ ಪ್ರತಿಭಟನೆ ಮಾಡಲಾಗುವುದು ಎಂದಿದ್ದಾರೆ.
ನಿಮ್ಮ ಉಚಿತ ಯೋಜನೆಯನ್ನು ನಾವ್ಯಾರು ಕೇಳುತ್ತಿಲ್ಲ. ಸಮಸ್ಯೆಗಳ ಬಗ್ಗೆ ಗಮನಹರಿಸಬೇಕೇ ಹೊರತು ಸರ್ಕಾರ ಬರೀ ಯೋಜನೆಗಳ ಬಗ್ಗೆ ತಲೆಕೆಡಿಸಿಕೊಂಡರೆ ಮುಂದಿನ ದಿನಗಳಲ್ಲಿ ಈ ಸರ್ಕಾರ ದಿವಾಳಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.