ರಾಮನಗರ, ಆ 17 (DaijiworldNews/HR): ಲೋಕಾಯುಕ್ತ ಅಧಿಕಾರಿಗಳು ಗುರುವಾರ ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ 25ಕ್ಕೂ ಹೆಚ್ಚು ಕಡೆಸರ್ಕಾರಿ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ್ದು, ಕನಕಪುರದಲ್ಲಿರುವ ಬಿಬಿಎಂಪಿ ಅಧಿಕಾರಿ ನಟರಾಜ್ ಅವರ ಮನೆ ಹಾಗೂ ಫಾರಂ ಹೌಸ್ಗೆ ದಾಳಿ ನಡೆಸಿದ್ದು, ಈ ವೇಳೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ರಾಮನಗರ ಲೋಕಾಯುಕ್ತ ಎಸ್ಪಿ ನೇತೃತ್ವದ ತಂಡ ಅಪಾರ ಪ್ರಮಾಣದ ಅಕ್ರಮಆಸ್ತಿ ಸಂಪಾದನೆ ಆರೋಪ ಹಿನ್ನೆಲೆಯಲ್ಲಿ ಕನಕಪುರ ತಾಲೂಕಿನ ಶಿವನಹಳ್ಳಿ ಗ್ರಾಮದಲ್ಲಿರುವ ಮನೆ ಜೊತೆಗೆ ಫಾರಂ ಹೌಸ್ ಮೇಲೂ ದಾಳಿ ಮಾಡಿದ್ದು, ಅಧಿಕಾರಿಗಳು ದಾಳಿ ನಡೆಸಿದ ವೇಳೆ ಅಧಿಕಾರಿ ನಾಪತ್ತೆಯಾಗಿದ್ದು ಮನೆಯಲ್ಲಿ ಇತರ ಸದಸ್ಯರು ಇದ್ದ ಪರಿಣಾಮ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಇನ್ನು ಬಿಬಿಎಂಪಿ ಅಧಿಕಾರಿ ನಟರಾಜ್ ಫಾರಂ ಹೌಸ್ಗೆ ಬೀಗ ಹಾಕಲಾಗಿದ್ದು ದಾಳಿ ಮಾಡಲು ಬಂದ ಅಧಿಕಾರಿಗಳು ಫಾರಂ ಹೌಸ್ ಕಾಯುತ್ತ ಕುಳಿತ್ತಿದ್ದಾರೆ ಎನ್ನಲಾಗಿದೆ.