ನವದೆಹಲಿ, ಆ 16 (DaijiworldNews/MS): ಇಸ್ರೋದ ಚಂದ್ರಯಾನ-೩ ವ್ಯೋಮ ನೌಕೆ ಗುರುವಾರ ಮಹತ್ವದ ಪ್ರಕ್ರಿಯೆಯನ್ನು ನಡೆಸಲಿದೆ. ಬುಧವಾರದಂದು ಚಂದ್ರನ ಐದನೇ ಮತ್ತು ಅಂತಿಮ ಕಕ್ಷೆಯ ಸುತ್ತಾಟವನ್ನು ಪೂರ್ಣಗೊಳಿಸಿದ್ದು ಚಂದ್ರನ ಮತ್ತಷ್ಟು ಸಮೀಪ ಬಂದಿದೆ.
ಪರಿಚಲನೆ ಪೂರ್ಣಗೊಂಡ ಹಿನ್ನಲೆ ನೌಕೆಯ ಪ್ರೊಪಲಷನ್ ಮಾಡ್ಯೂಲ್ನಿಂದ ಲ್ಯಾಂಡರ್ ಮತ್ತು ರೋವರ್ಗಳು ಪ್ರತ್ಯೇಕಗೊಳ್ಳಲಿವೆ. ಇದರೊಂದಿಗೆ ಲ್ಯಾಂಡರ್ ಆ.23ರಂದು ಚಂದ್ರನ ಕಕೆಯ ಮೇಲೆ ಇಳಿಯಲು ದಿನಗಣನೆ ಆರಂಭವಾಗಲಿದೆ.
ಈ ಪ್ರಕ್ರಿಯೆಯಲ್ಲಿ ಲ್ಯಾಂಡರ್ ಮತ್ತು ರೋವರ್ ಡೀಬೂಸ್ಟ್ ಮಾಡುವ ಮೂಲಕ ಅದನ್ನು ಚಂದ್ರನಿಂದ 100ಕಿಮೀ. ವೇಗದಲ್ಲಿ ಕೊಂಡೊಯ್ದು, ೩೦ ಕಿ.ಮೀ ಇದ್ದಾಗ ವೇಗವನ್ನು ಹಂತ ಹಂತವಾಗಿ ತಗ್ಗಿಸಿ ಚಂದ್ರನ ನಿಗದಿತ ಸ್ಥಳದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಲಾಗುತ್ತದೆ.