ಬೆಂಗಳೂರು, ,ಆ 16 (DaijiworldNews/AK): ರಾಜ್ಯದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್ಇಪಿ) ರದ್ದುಗೊಳಿಸುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಇನ್ಫೋಸಿಸ್ ಮಂಡಳಿಯ ಮಾಜಿ ಸದಸ್ಯ ಮೋಹನ್ದಾಸ್ ಪೈ ಅವರು ಟೀಕಿಸಿದ್ದಾರೆ.
ಈ ಕುರಿತಾಗಿ ಮೋಹನ್ದಾಸ್ ಪೈ ಅವರು ಟ್ವೀಟ್ ಮಾಡಿದ್ದು, ಸರ್ಕಾರವು ಅಗತ್ಯ ಬಿದ್ದರೆ ಎನ್ಇಪಿ ನಿಯಮಗಳನ್ನು ಮಾರ್ಪಾಡುಗೊಳಿಸಬಹುದಾಗಿತ್ತು. ರಾಜಕೀಯ ಹಿತಾಸಕ್ತಿಗಾಗಿ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ರಾಜಿಯಾಗಿರುವುದು ಸರಿಯಲ್ಲ, ಸಂವಿಧಾನಿಕ ತತ್ವಗಳು ಮರೆಯಾದವೇ ಎಂದು ಪ್ರಶ್ನಿಸಿದ್ದಾರೆ.
ಇದು ನಮ್ಮ ಯುವಕರ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ. ಎನ್ಇಪಿ ರದ್ದು ಮಾಡುವ ನಿರ್ಣಯವು ಬಹಳ ಕೆಟ್ಟ ನಿರ್ಧಾರವಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯು ಶಿಕ್ಷಣ ಸಂಸ್ಥೆಗಳಿಗೆ ಹೊಸ ಆಯಾಮ ಹಾಗೂ ತತ್ವಗಳನ್ನು ಕಟ್ಟಿಕೊಡುತ್ತಿತ್ತು ಎಂದು ಹೇಳಿದ್ದಾರೆ.