ದೇವನಹಳ್ಳಿ, ಆ 15 (DaijiworldNews/MS): ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕಾರ್ಡುದಾರರಿಗೆ ವಿತರಿಸಲು ಹೆಚ್ಚುವರಿ ಅಕ್ಕಿ ಲಭ್ಯವಾಗದೆ ಇರುವುದರಿಂದ ಕಳೆದ ತಿಂಗಳು ಹಣ ವರ್ಗಾಯಿಸಿರುವಂತೆ ಈ ತಿಂಗಳು ಕೂಡ ಹೆಚ್ಚುವರಿ 5 ಕೆಜಿ ಬದಲು ಹಣ ನೀಡುತ್ತೇವೆ ಎಂದು ದೇವನಹಳ್ಳಿಯಲ್ಲಿ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದ್ದಾರೆ.
ಐದು ಗ್ಯಾರಂಟಿ ಯೋಜನೆಗಳ ಪೈಕಿ ಮೂರನೇ ಗ್ಯಾರಂಟಿಯಾದ ‘ಅನ್ನಭಾಗ್ಯ’ ಯೋಜನೆ ಅಡಿ ಅಂತ್ಯೋದಯ ಹಾಗೂ ಬಿಪಿಎಲ್ ಕುಟುಂಬದ ಸದಸ್ಯರಿಗೆ ಪ್ರಸ್ತುತ ವಿತರಿಸುತ್ತಿರುವ 5 ಕೆ.ಜಿ. ಅಕ್ಕಿ ಜತೆಗೆ ಹೆಚ್ಚುವರಿ 5 ಕೆ.ಜಿ. ಅಕ್ಕಿ ನೀಡುವುದಾಗಿ ಹೇಳಲಾಗಿತ್ತು. ಅಕ್ಕಿ ಲಭ್ಯವಾಗದ ಕಾರಣ ಸರ್ಕಾರ ಪ್ರತಿ ವ್ಯಕ್ತಿಗೆ (5 ಕೆ.ಜಿ. ಅಕ್ಕಿ ದರ) ತಿಂಗಳಿಗೆ 170 ರು.ಗಳಂತೆ ಕಳೆದ ಮಾಹೆಯಲ್ಲಿ ಕುಟುಂಬ ಸದಸ್ಯರ ಹಣವನ್ನು ಕುಟುಂಬದ ಮುಖ್ಯಸ್ಥರ ಖಾತೆಗೆ ಜಮೆ ಮಾಡಿತ್ತು.
ಸೆಪ್ಟೆಂಬರ್ ತಿಂಗಳಿನಲ್ಲೂ ಕೂಡ ಹೆಚ್ಚುವರಿ ಅಕ್ಕಿ ಸಿಗುವುದು ಅನುಮಾನ. ಆದಷ್ಟು ಬೇಗ ಹೆಚ್ಚುವರಿ ಅಕ್ಕಿ ಖರೀದಿಸಿ ವಿತರಣೆ ಮಾಡುತ್ತೇವೆ ಎಂದರು.