ಬೆಂಗಳೂರು, ಆ 14(DaijiworldNews/MS): ಭಾರತದ ಮಹತ್ವಾಕಾಂಕ್ಷೆಯ ಮೂರನೇ ಚಂದ್ರಯಾನದ ಬಾಹ್ಯಾಕಾಶ ನೌಕೆ ಚಂದ್ರಯಾನ-3 ಇಂದು ಸೋಮವಾರ ಮತ್ತೊಂದು ಹೆಜ್ಜೆ ಮುಂದೆ ಹಾಕಿದ್ದು ಚಂದ್ರನ ಮೇಲ್ಮೈಗೆ ಇನ್ನಷ್ಟು ಹತ್ತಿರಕ್ಕೆ ಬಂದಿದೆ.
ಚಂದ್ರಯಾನ-3 ಬಾಹ್ಯಾಕಾಶ ನೌಕೆಯ ಸಮೀಪ್ಯತೆಯನ್ನು ಇಸ್ರೋ ಮತ್ತಷ್ಟು ಕಡಿಮೆ ಮಾಡಿದ್ದು, ಇಂದು ನಡೆಸಿದ ನಿಖರವಾದ ಕುಶಲತೆಯು 150 ಕಿಮೀ x 177 ಕಿಮೀಗಳ ಸಮೀಪ ವೃತ್ತಾಕಾರದ ಕಕ್ಷೆಯನ್ನು ಸಾಧಿಸಿದೆ ಎಂದು ಇಸ್ರೋ ಟ್ವೀಟ್ನಲ್ಲಿ ತಿಳಿಸಿದೆ.
ಮುಂದಿನ ಕಾರ್ಯಾಚರಣೆಯನ್ನು ಆಗಸ್ಟ್ 16, 2023 ರಂದು ಬೆಳಿಗ್ಗೆ 8.30 ರ ಸುಮಾರಿಗೆ ಯೋಜಿಸಲಾಗಿದೆ" ಎಂದು ಇಸ್ರೋ ಹೇಳಿದೆ. ನಂತರ ಲ್ಯಾಂಡರ್ ಮತ್ತು ರೋವರ್ ನ್ನು ಒಳಗೊಂಡಿರುವ ಲ್ಯಾಂಡಿಂಗ್ ಮಾಡ್ಯೂಲ್ ಪ್ರೊಪಲ್ಷನ್ ಮಾಡ್ಯೂಲ್ನಿಂದ ದೂರ ಹೋಗಲಿದೆ.
ಎಲ್ಲವೂ ಅಂದುಕೊಂಡಂತೆ ನಡೆದರೆ ಆ.೨೩ರಂದು ಲ್ಯಾಂಡ್ ರೋವರ್ ಚಂದ್ರನತ್ತ ಇಳಿಯಲಿದೆ.