ಚೆನ್ನೈ, ಆ 14 (DaijiworldNews/AK): ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಫೇಲ್ ಆಗಿರುವ ಕಾರಣ ಮನನೊಂದು 19 ವರ್ಷದ ಮಗ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೆ ತಂದೆ ಕೂಡ ಸಾವನ್ನಪ್ಪಿರುವ ಘಟನೆ ತಮಿಳುನಾಡಿನಲ್ಲಿ ವರದಿಯಾಗಿದೆ.
ಆತ್ಮಹತ್ಯೆ ಮಾಡಿಕೊಂಡವರು ಜಗದೀಶ್ವರನ್ ಮತ್ತು ತಂದೆ ಸೆಲ್ವಶೇಖರ್ ಎಂದು ವರದಿಯಾಗಿದೆ. ಪೊಲೀಸ್ ಮೂಲಗಳ ಪ್ರಕಾರ 2022 ರಲ್ಲಿ ದ್ವೀತಿಯ ಪಿಯುಸಿಯಲ್ಲಿ 427 ಅಂಕಗಳೊಂದಿಗೆ ಪಾಸಾಗಿದ್ದ ಜಗದೀಶ್ವರನ್ ಎಂಬ ವಿದ್ಯಾರ್ಥಿ ಸತತ ಎರಡು ಪ್ರಯತ್ನಗಳಲ್ಲಿ ನೀಟ್ ಪ್ರವೇಶ ಪರೀಕ್ಷೆಯನ್ನು ಪಾಸಾಗಲು ಸಾಧ್ಯವಾಗಲಿಲ್ಲ.ಇತ್ತೀಚಿನ ಫಲಿತಾಂಶದಿಂದ ತೀವ್ರ ನೊಂದಿದ್ದ ಜಗದೀಶ್ವರನ್ ಶನಿವಾರ ತಂದೆ ಕರೆ ಮಾಡಿದರೂ ಸ್ಪಂದಿಸಿರಲಿಲ್ಲ ಬಳಿಕ ಮನೆಯಲ್ಲಿ ಜಗದೀಶ್ವರನ್ ಶವವಾಗಿ ಪತ್ತೆಯಾಗಿದ್ದಾನೆ.
ಇದೇ ನೋವಲ್ಲಿದ್ದ ತಂದೆ ಸಲ್ವಶೇಖರ್ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮಗ ಜಗದೀಶ್ವರನ್ ಸಾವನ್ನಪ್ಪಿದ ಮರು ದಿನವೇ ತಂದೆ ಸೆಲ್ವಶೇಖರ್ ಶವವಾಗಿ ಪತ್ತೆಯಾಗಿದೆ.
ಈ ಘಟನೆ ಬಳಿಕ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್, ನಿಮ್ಮ ಗುರಿಗೆ ತೊಡಕಾಗಿರುವ ನೀಟ್ ಪರೀಕ್ಷೆಯನ್ನು ನಾವು ಖಂಡಿತವಾಗಿಯೂ ತೆಗೆದು ಹಾಕುತ್ತೇವೆ. ಯಾರೂ ಕೂಡ ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ನಾನು ವಿದ್ಯಾರ್ಥಿಗಳೊಂದಿಗೆ ಮನವಿ ಮಾಡುತ್ತೇನೆ. ತಮಿಳುನಾಡು ಸರ್ಕಾರ ಈ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತವಾಗಿದೆ ಎಂದು ಹೇಳಿದ್ದಾರೆ.
ಜಗದೀಶ್ವರನ್ ಅವರ ಕುಟುಂಬ, ಸ್ನೇಹಿತ ವರ್ಗ ಹಾಗೂ ಬಂಧು ಬಳಗಕ್ಕೆ ಹೇಗೆ ಸಾಂತ್ವನ ಹೇಳುವುದು ಎಂದು ನನಗೆ ತಿಳಿಯುತ್ತಿಲ್ಲ. ವೈದ್ಯನಾಗುವ ಆಸೆ ಕಂಡಿದ್ದ ಬುದ್ದಿವಂತ ವಿದ್ಯಾರ್ಥಿಯೊಬ್ಬ ನೀಟ್ನಿಂದ ಆತ್ಮಹತ್ಯೆ ಮಾಡಿಕೊಂಡವರ ಸಾಲಿಗೆ ಸೇರಿದ್ದು ದುರಂತ ಎಂದು ಹೇಳಿದ್ದಾರೆ.