ಬೆಂಗಳೂರು, ಆ 14(DaijiworldNews/MS): ಮಾಜಿ ಸಚಿವ ಅಶ್ವಥ್ ನಾರಾಯಣ್ ವಿರುದ್ದ ಕಿಡಿಕಾರಿರುವ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು, ಅಶ್ವಥ್ ನಾರಾಯಣ್ ಅಲ್ಲ ಅವರೊಬ್ಬ ನವರಂಗಿ ನಾರಾಯಣ ಎಂದು ಲೇವಡಿ ಮಾಡಿದ್ದಾರೆ.
ಡಿಕೆಶಿ ಬೆಂಗಳೂರು ಅಭಿವೃದ್ಧಿ ಸಚಿವ ಅಲ್ಲ, ಬೆಂಗಳೂರು ನಿರ್ನಾಮ ಸಚಿವ ಎಂದು ಆರೋಪ ಮಾಡಿರುವ ಅಶ್ವಥ್ ನಾರಾಯಣ್ ಹೇಳಿಕೆ ವಿರುದ್ಧ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಅಶ್ವಥ್ ನಾರಾಯಣ್ ಅಲ್ಲ ಅವರು, ನವರಂಗಿ ನಾರಾಯಣ. ರಾಮನಗರಕ್ಕೆ ಬಂದು ಎಲ್ಲಾನೂ ಕ್ಲೀನ್ ಮಾಡ್ತೀನಿ ಎಂದು ಹೇಳಿ ಅವರ ಪಕ್ಷವನ್ನೇ ಕ್ಲೀನ್ ಮಾಡಿ ಹೋದರು ಎಂದು ವ್ಯಂಗ್ಯವಾಡಿದರು.
ಅವರ ಇಲಾಖೆಯಲ್ಲಿ, ಬೆಂಗಳೂರು ನಗರದಲ್ಲಿ ಏನು ಮಾಡಿದ್ದಾರೆ ಎನ್ನುವುದನ್ನು ನಾವು ಇನ್ನು ಬಿಚ್ಚಿಟ್ಟಿಲ್ಲ . ಏನೇನು ಆಟ ಆಡಿದ್ದಾರೆ ಯಾರನ್ನು ಎತ್ತಿ ಕಟ್ಟುತ್ತಿದ್ದಾರೆ ಎಲ್ಲವೂ ತಿಳಿದಿದೆ. ಬಿಬಿಎಂಪಿಯಲ್ಲಿ ಒಂದು ಅಗ್ನಿ ಅವಘಡ ಆಯಿತು ಎಲ್ಲದರ ಬಗ್ಗೆ ಮಾತನಾಡುವೆ. ಸ್ವಾತಂತ್ರ್ಯ ದಿನಾಚರಣೆ ಆಗಲಿ ಎಂದು ಹೇಳಿದರು.