ನವದೆಹಲಿ,ಆ 14(DaijiworldNews/AK): ಒಲಿಂಪಿಕ್ಸ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ದೆಹಲಿಯ ತಿಹಾರ್ ಜೈಲಿಗೆ ಶರಣಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಮಾಜಿ ಜೂನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಸಾಗರ್ ಧಂಕರ್ ಅವರನ್ನು ಥಳಿಸಿ ಕೊಂದ ಆರೋಪ ಅಥ್ಲೀಟ್ ಮೇಲಿತ್ತು.
2021ರ ಮೇ 4 ರಂದು ನಗರದ ಛತ್ರಸಾಲ್ ಕ್ರೀಡಾಂಗಣದ ಪಾರ್ಕಿಂಗ್ ಸ್ಥಳದಲ್ಲಿ ಸಾಗರ್ ಧಂಕರ್ ಮತ್ತು ಅವರ ಸ್ನೇಹಿತರಾದ ಜೈ ಭಗವಾನ್ ಮತ್ತು ಭಗತ್ ಮೇಲೆ ಕೆಲವು ಆಸ್ತಿ ವಿವಾದದ ಮೇಲೆ ಸುಶೀಲ್ ಕುಮಾರ್ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಸುಶೀಲ್ ಕುಮಾರ್ ಜಾಮೀನಿನ ಮೇಲೆ ಹೊರಗಿದ್ದು, ಈ ವೇಳೆ ಅವರಿಗೆ ಮೊಣಕಾಲು ಆಪರೇಷನ್ ಕೂಡ ಆಗಿತ್ತು. ಸುಶೀಲ್ ಕುಮಾರ್ ಅವರು ಜೂನ್ 2, 2021 ರಿಂದ ನ್ಯಾಯಾಂಗ ಬಂಧನದಲ್ಲಿದ್ದರು, ನ್ಯಾಯಾಲಯವು ಆರೋಗ್ಯ ಕಾರಣಗಳಿಗಾಗಿ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು.
ಧಂಖರ್ ಹತ್ಯೆ ಪ್ರಕರಣದಲ್ಲಿ ಸುಶೀಲ್ ಕುಮಾರ್ ಅವರನ್ನು ಪ್ರಮುಖ ಆರೋಪಿಯನ್ನಾಗಿ ಮಾಡಿದ್ದ ದೆಹಲಿ ಪೊಲೀಸರು 170 ಪುಟಗಳ ಚಾರ್ಜ್ ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಕುಸ್ತಿಪಟು ಸುಶೀಲ್ ಕುಮಾರ್ ಮತ್ತೆ ಶರಣಾಗಿದ್ದಾರೆ.