ಬೆಂಗಳೂರು,ಏ08(AZM): ಚೆಕ್ ಬೌನ್ಸ್ ಆರೋಪದ ಹಿನ್ನಲೆ ಮಾಜಿ ಸಚಿವ ಬಾಬು ರಾವ್ ಚಿಂಚನಸೂರ ವಿರುದ್ಧ ಜನಪ್ರತಿನಿಧಿಗಳ ನ್ಯಾಯಾಲಯದಿಂದ ಜಾಮೀನು ರಹಿತ ವಾರೆಂಟ್ ಜಾರಿಯಾಗಿದೆ.
ಅಂಜನಾ ಶಾಂತವೀರ್ ಎಂಬುವವರು ಚಿಂಚನಸೂರ್ ವಿರುದ್ಧ ದೂರು ದಾಖಲಿಸಿದ್ದರು ಈ ಹಿನ್ನೆಲೆ ಜನಪ್ರತಿನಿಧಿಗಳ ವಿಶೇಷ ವಿಚಾರಣೆಗೆ ಹಾಜರಾಗುವಂತೆ ಚಿಂಚನಸೂರ್ ಗೆ ನೋಟಿಸ್ ನೀಡಿತ್ತು. ಆದರೆ ಚಿಂಚನಸೂರ್ ವಿಚಾರಣೆಗೆ ಗೈರಾಗಿದ್ದರು. ಈ ಹಿನ್ನೆಲೆ ಚಿಂಚನಸೂರ್ ಅವರನ್ನು ಬಂಧಿಸಿ ,ಏ 2 ರಂದು ಕೋರ್ಟ್ ಎದುರು ಹಾಜರುಪಡಿಸುವಂತೆ ನ್ಯಾಯಾಲಯ ಪೊಲೀಸರಿಗೆ ಆದೇಶ ನೀಡಿದೆ.