ತುಮಕೂರು, ಆ 13 (DaijiworldNews/HR): ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯ ತೊಗರಿಘಟ್ಟ ಬಳಿ ಕಾಂಗ್ರೆಸ್ ಮುಖಂಡನೊಬ್ಬನನ್ನು ಹತ್ಯೆ ಮಾಡಲಾಗಿದ್ದು, ಜಿ. ಪರಮೇಶ್ವರ್ ಅವರಿಗೆ ಮತ ನೀಡಿದ್ದಕ್ಕೆ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಕಾಂಗ್ರೆಸ್ ಮುಖಂಡ ದೇವರಾಜ್ (30) ಎಂಬುವರನ್ನು ಜೆಡಿಎಸ್ ಮುಖಂಡ ಮರಿಯಪ್ಪ ಎಂಬುವರು ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಮರಿಯಪ್ಪ ಗ್ರಾಮದ ಮುಖಂಡ ಹಾಗೂ ಜೆಡಿಎಸ್ ಪಕ್ಷದಲ್ಲಿದ್ದು, ದೇವರಾಜ್ ಕಾಂಗ್ರೆಸ್ ಮುಖಂಡ ಆನಂದ್ರವರ ಸಂಬಂಧಿಯಾಗಿದ್ದರು. ಇಬ್ಬರ ನಡುವೆ ರಾಜಕೀಯ ವೈಮನಸ್ಸು ಇತ್ತು. ಇತ್ತೀಚಿಗೆ ಮರಿಯಪ್ಪ ದೇವರಾಜ್ರನ್ನು ಪಾರ್ಟಿ ಮಾಡೊಣ ಬಾ ಎಂದು ಕರೆದುಕೊಂಡು ಹೋಗಿದ್ದರು. ಮರಿಯಪ್ಪ ಅವರ ಜೊತೆ ಹೋದ ದೇವರಾಜ್ ಶವವಾಗಿ ಪತ್ತೆಯಾಗಿದ್ದಾರೆ.
ಇನ್ನು ದೇವರಾಜ್ ಅಪಘಾತದಲ್ಲಿ ಮೃತರಾಗಿರುವ ರೀತಿ ಬಿಂಬಿಸಲಾಗಿತ್ತು, ಆದರೆ ದೇವರಾಜ್ ತಲೆ ಬಲವಾಗಿ ಹೊಡೆದಿರುವ ಗುರುತು ಪತ್ತೆಯಾಗಿದೆ.