ಲಕ್ನೋ, ಆ 13 (DaijiworldNews/HR): ಉತ್ತರ ಪ್ರದೇಶ ಸರ್ಕಾರವು ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳನ್ನು ಭಾನುವಾರ (ಆಗಸ್ಟ್ 13) ತೆರೆದಿರಲು ಸೂಚಿಸಿದೆ.
ಆಜಾದಿ ಕಾ ಅಮೃತ್ ಮಹೋತ್ಸವ ಯೋಜನೆಯಡಿ ಹರ್ ಘರ್ ತಿರಂಗಾ ಮತ್ತು ಮೇರಿ ಮತಿ ಮೇರಾ ದೇಶ್ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಈ ಆದೇಶವನ್ನು ಸರ್ಕಾರ ಹೊರಡಿಸಿದೆ.
ಆದೇಶದ ಪ್ರಕಾರ, ಎಲ್ಲಾ ವಿದ್ಯಾರ್ಥಿಗಳಿಗೆ ವಿಶೇಷ ಮಧ್ಯಾಹ್ನದ ಊಟವನ್ನು ಒದಗಿಸಲಾಗುವುದು. ಯೋಗಿ ಆದಿತ್ಯನಾಥ್ ಸರ್ಕಾರವು ಶಾಲೆಗಳಲ್ಲಿ ಹರ್ ಘರ್ ತಿರಂಗ ಮತ್ತು ಮೇರಿ ಮತಿ ಮೇರಾ ದೇಶ್ ಕಾರ್ಯಕ್ರಮಗಳ ದಿನಾಂಕವಾರು ರೂಪುರೇಷೆಗಳನ್ನು ನಿಗದಿಪಡಿಸಿದೆ.