ಸೂರತ್, ಆ 12 (DaijiworldNews/AK): ಹಾಡಹಗಲೇ ಐವರು ದರೋಡೆಕೋರರು ಬ್ಯಾಂಕ್ ಒಂದನ್ನು ಲೂಟಿ ಮಾಡಿ 14 ಲಕ್ಷ ರೂ.ನಗದು ದೋಚಿ ಪರಾರಿಯಾದ ಘಟನೆ ಗುಜರಾತ್ನ ಸೂರತ್ನಲ್ಲಿ ಶುಕ್ರವಾರ ನಡೆದಿದೆ.
ಬ್ಯಾಂಕ್ ಆಫ್ ಮಹಾರಾಷ್ಟ್ರದ ಸೂರತ್ ಶಾಖೆಯಲ್ಲಿ ಈ ಘಟನೆ ನಡೆದಿದ್ದು ಘಟನೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಶುಕ್ರವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಹೆಲ್ಮೆಟ್ ಧರಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಬಂದ ದುಷ್ಕರ್ಮಿಗಳು ಶಸ್ತ್ರಾಸ್ತವನ್ನು ತೋರಿಸಿ ಬ್ಯಾಂಕ್ ಸಿಬ್ಬಂದಿಗಳನ್ನು ಹಾಗೂ ಗ್ರಾಹಕರನ್ನು ಬೆದರಿಸಿ ಕೊಠಡಿಯೊಳಗೆ ಕೂಡಿ ಹಾಕಿ ಬಳಿಕ ಓರ್ವ ವ್ಯಕ್ತಿ ಲಾಕರ್ ನಲ್ಲಿದ್ದ ಹಣವನ್ನು ಬ್ಯಾಗ್ ನೊಳಗೆ ತುಂಬಿಸಿ ಬೈಕ್ ನೊಂದಿಗೆ ಪರಾರಿಯಾಗಿದ್ದಾರೆ.
ನಡೆದ ಕೃತ್ಯ ಅಲ್ಲಿನ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಕೂಡಲೇ ಬ್ಯಾಂಕ್ ಸಿಬ್ಬಂದಿಗಳು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಎಚ್ಚೆತ್ತ ಪೊಲೀಸರು ನಗರದಾದ್ಯಂತ ನಾಖಾಬಂಧಿ ಹಾಕಿ ಆರೋಪಿಗಳ ಶೋಧ ನಡೆಸಿದ್ದಾರೆ. ಪತ್ತೆಯಾಗದ ಹಿನ್ನೆಲೆಯಲ್ಲಿ ಸಿಸಿ ಕ್ಯಾಮೆರಾ ಆದರದ ಮೇಲೆ ದರೋಡೆಕೋರರ ಶೋಧಕ್ಕೆ ಪೊಲೀಸರು ಮುಂದಾಗಿದ್ದಾರೆ.