ನವದೆಹಲಿ, ಆ 12 (DaijiworldNews/AK): ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ ಅವರು, ತಮ್ಮ ಟ್ವೀಟರ್ ಬಯೋವನ್ನು ‘ಅಮಾನತುಗೊಂಡ ಸಂಸದ’ ಎಂದು ಬದಲಿಸಿದ್ದಾರೆ.
ಅನುಚಿತ ವರ್ತನೆ, ನಿಯಮಗಳ ಉಲ್ಲಂಘನೆ, ಹಾಗೂ ಮಾನಹಾನಿಯಾಗುವಂತಹ ವರ್ತನೆಗಾಗಿ ರಾಜ್ಯಸಭೆಯಿಂದ ರಾಘವ್ ಚಡ್ಡಾ ಅವರನ್ನು ಅಮಾನತುಗೊಳಿಸಲಾಗಿತ್ತು.ರಾಘವ್ ಚಡ್ಡಾ ವಿರುದ್ಧದ ಆರೋಪದ ಕುರಿತು ಹಕ್ಕುಚ್ಯುತಿ ಸಮಿತಿಯು ವರದಿ ಇನ್ನೆಷ್ಟೇ ನೀಡಬೇಕಿದೆ.
ಪ್ರಸ್ತಾವಿತ ರಾಷ್ಟ್ರೀಯ ರಾಜಧಾನಿ ದಿಲ್ಲಿ ಕೇಂದ್ರಾಡಳಿತ ಪ್ರದೇಶದ ಸರ್ಕಾರ (ತಿದ್ದುಪಡಿ) ಮಸೂದೆ, 2023ರ ಆಯ್ಕೆ ಸಮಿತಿಯಲ್ಲಿ ರಾಜ್ಯಸಭೆಯ ಕೆಲವು ಸದಸ್ಯರ ಹೆಸರನ್ನು ಅವರ ಒಪ್ಪಿಗೆ ಇಲ್ಲದೆ ಸೇರ್ಪಡೆ ಮಾಡಿರುವ ಕುರಿತು ಚಡ್ಡಾ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಭಾನಾಯಕರಾಗಿದ್ದ ಪಿಯೂಷ್ ಗೋಯಲ್ ಅವರು ಶುಕ್ರವಾರ ಅಮಾನತು ನಿರ್ಣಯ ಮಂಡಿಸಿದ್ದರು.