ನವದೆಹಲಿ, ಎ08(SS): ಭಾರತೀಯ ಜನತಾ ಪಕ್ಷ 'ಸಂಕಲ್ಪ ಪತ್ರ'ವನ್ನು ಬಿಡುಗಡೆ ಮಾಡಿದ್ದು, ಪ್ರಣಾಳಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು, ನಾವೆಲ್ಲ ಭಾರತೀಯರೂ ಸೇರಿ ಅತ್ಯಂತ ಬಲಿಷ್ಠವಾದ ಮತ್ತು ಎಲ್ಲವನ್ನೂ ಒಳಗೊಂಡಂತಿರುವ ದೇಶವನ್ನು ಕಟ್ಟೋಣ. ಭಾರತದ ನಾಗರಿಕರಿಗೆಲ್ಲ ಗೌರವ, ಸಮೃದ್ಧತೆ, ಭದ್ರತೆ ಮತ್ತು ಅವಕಾಶಗಳು ಸಿಗುವಂಥ ಭಾರತದ ನಿರ್ಮಾಣ ಮಾಡೋಣ ಎಂದು ಪ್ರಣಾಳಿಕೆಯಲ್ಲಿ ಬರೆದಿದ್ದಾರೆ.
ಈ ವೇಳೆ ಬಿಜೆಪಿ ರಾಷ್ಟ್ರಾಧ್ಯಕ್ಷರಾದ ಅಮಿತ್ ಶಾ ಮತ್ತು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಕೂಡ, ಪ್ರಣಾಳಿಕೆ ಬಿಡುಗಡೆಗೂ ಮುನ್ನ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಬಿಜೆಪಿಗೆ ಬಹುಮತ ಬರಲು ಒಗ್ಗಟ್ಟಿನಿಂದ ಶ್ರಮಿಸೋಣ ಮತ್ತು ಮತ್ತೊಮ್ಮೆ ನರೇಂದ್ರ ಮೋದಿಯವರು ಭಾರತದ ಪ್ರಧಾನಿಯಾಗಲು ನಮ್ಮೆಲ್ಲ ಶಕ್ತಿಗಳನ್ನು ವ್ಯಯಿಸೋಣ ಎಂದು ಹೇಳಿದ್ದಾರೆ.
ಎಲ್ಲಕ್ಕಿಂತ ದೇಶ ಮುಖ್ಯ ಎಂಬ ನಿರ್ಣಯ. ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವದಿಂದ ಭಾರತದ ಭದ್ರತಾ ವ್ಯಾಖ್ಯಾನವೇ ಬದಲಾಗಿದೆ ಎಂದಿರುವ ಬಿಜೆಪಿ, ಎಲ್ಲಕ್ಕಿಂತ 'ದೇಶವೇ ಮೊದಲು' ಎಂದು ಹೇಳಿದ್ದು, ಅದರಡಿಯಲ್ಲಿ ಹಲವಾರು ಸಂಗತಿಗಳನ್ನು ಪ್ರಣಾಳಿಕೆಯಲ್ಲಿ ವಿವರಿಸಿದೆ.
ಮುಂದಿನ 5 ವರ್ಷಗಳ ಅಭಿವೃದ್ಧಿಯ ರೂಪುರೇಷೆಗಳೊಂದಿಗೆ, ಭಾರತೀಯ ಜನತಾ ಪಕ್ಷ 'ಸಂಕಲ್ಪ ಪತ್ರ'ವನ್ನು ಬಿಡುಗಡೆ ಮಾಡಿದೆ. ಲೋಕಸಭೆ ಚುನಾವಣೆಯ ಮೊದಲ ಹಂತಹ ಮತದಾನಕ್ಕೆ ಕೆಲವೇ ದಿನಗಳು ಬಾಕಿಯಿರುವಾಗ ಭಾರತೀಯ ಜನತಾ ಪಕ್ಷ 'ಸಂಕಲ್ಪಿತ್ ಭಾರತ್, ಸಕ್ಷಮ್ ಭಾರತ್' ಎಂಬ ಉದ್ಘೋಷದೊಂದಿಗೆ, ಭರವಸೆಗಳಿಂದ ತುಂಬಿದ ಚುನಾವಣಾ ಪ್ರಣಾಳಿಕೆಯನ್ನು ಹೊರತಂದಿದೆ.