ನವದೆಹಲಿ,ಏ07(AZM):ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಠು ಸುಳ್ಳು ಸುದ್ದಿಗಳು ಹರಡುತ್ತಿರುವ ಹಿನ್ನಲೆಯಲ್ಲಿ, ಅದನ್ನು ತಪ್ಪಿಸಲು ಸಾಮಾಜಿಕ ಜಾಲತಾಣಗಳ ಖಾತೆಗಳಿಗೆ ಆಧಾರ್ ಕಾರ್ಡ್ ಸಂಖ್ಯೆಯನ್ನು ಜೋಡಣೆ ಮಾಡುವ ನೀತಿಯನ್ನು ಜಾರಿಗೆಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಗಳ ಮೂಲಕ ಸುಳ್ಳು ಸುದ್ದಿ ಹರಡದಂತೆ ಜಾಗೃತೆ ವಹಿಸಲು ಈ ನೀತಿಯನ್ನು ಜಾರಿಗೆ ಮಾಡಲಾಗುತ್ತಿದೆ ಎನ್ನಲಾಗಿದೆ. ಅನೇಕ ಸಂದರ್ಭದಲ್ಲಿ ಟ್ರೋಲ್ ಮಾಡುವ ಪೇಜ್ ಗಳು ಯಾರದು ಎನ್ನುವುದು ಗೊತ್ತಾಗುವುದಿಲ್ಲ. ಇದಕ್ಕೆಲ್ಲ ಕಡಿವಾಣ ಹಾಕುವ ಉದ್ದೇಶದಿಂದ ಸೋಷಿಯಲ್ ಮೀಡಿಯಾ ಖಾತೆಗಳಿಗೆ ಆಧಾರ್ ಕಾರ್ಡ್, ಪಾಸ್ ಪೋರ್ಟ್, ಮೊಬೈಲ್ ನಂಬರ್ ನಂತಹ ಅಧಿಕೃತ ಗುರುತಿನ ಚೀಟಿ ಜೋಡಣೆ ಮಾಡುವುದನ್ನು ಕಡ್ಡಾಯಗೊಳಿಸಲಾಗುತ್ತಿದೆ.
ಇದರಿಂದ ಸುಳ್ಳು ಸುದ್ದಿಗಳಿಗೆ ಅನಧಿಕೃತ ಟ್ರೋಲ್ ಗಳಿಗೆ ಕಡಿವಾಣ ಹಾಕಬಹುದಾಗಿದೆ ಎಂಬುದು ಸರ್ಕಾರದ ಚಿಂತನೆಯಾಗಿದೆ. ಈಗಾಗಲೇ, ನಿಯಮಾವಳಿ ರೂಪಿಸಲಾಗಿದೆ. ಸೈಬರ್ ಕ್ರೈಮ್ ನಡೆದ ಮತ್ತು ಇಂತಹ ದೂರುಗಳು ಬಂದ ಸಂದರ್ಭದಲ್ಲಿ ಸೋಷಿಯಲ್ ಮೀಡಿಯಾ ಖಾತೆಗಳ ವಿವರಗಳನ್ನು ಕೇಳಲಾಗುವುದು. ಸೂಕ್ತವಾದ ಮಾಹಿತಿ ನೀಡದಿದ್ದರೆ ಅಂತಹ ಪೇಜ್ ಗಳ ಮುಖ್ಯಸ್ಥರ ವಿರುದ್ಧ ಐಟಿ ಕಾಯ್ದೆ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.