ಕಲಬುರಗಿ,ಏ06(AZM):ಕಾಂಗ್ರೆಸ್ ಜೆಡಿಎಸ್ ದೋಸ್ತಿ ಸರಕಾರವು ಲೋಕಸಭಾ ಚುನಾವಣಾ ಬಳಿಕ ಇರುವುದಿಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಭವಿಷ್ಯ ನುಡಿದಿದ್ದಾರೆ.
ಈ ಕುರಿತು ಕಲಬುರಗಿಯಲ್ಲಿ ಮಾತನಾಡಿದ ಅವರು, ಸೂರ್ಯ ಚಂದ್ರರಿರುವುದು ಎಷ್ಟೋ ಸತ್ಯವೋ ಮೋದಿ ಮತ್ತೆ ಪ್ರಧಾನಿ ಆಗುವುದು ಅಷ್ಟೇ ಸತ್ಯ ಎಂದು ವಿಶ್ವಾಸವ್ಯಕ್ತಪಡಿಸಿದ್ದಾರೆ. ಅಲ್ಲದೆ, ಎಲೆಕ್ಷನ್ ಬಂದ ನಂತರ ಕುಮಾರಸ್ವಾಮಿಯೇ ರಾಜೀನಾಮೆ ಕೊಟ್ಟು ಮನೆಗೆ ಹೋಗೋದು ಪಕ್ಕಾ ಎಂದು ತಿಳಿಸಿದರು.
ಇನ್ನೂ ಕಲಬುರಗಿಯಲ್ಲಿ ಉಮೇಶ್ ಜಾಧವ್ ಗೆಲುವು ನಿಶ್ಚಿತವಾಗಿದ್ದು, ಅದಕ್ಕಾಗಿ ಈಗಾಗಲೇ ಮಲ್ಲಿಕಾರ್ಜುನ ಅವರಿಗೆ ನಡುಕ ಶುರುವಾಗಿದೆ ಎಂದು ಹೇಳಿದರು.